ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಕರಡು ವಾರ್ಡ್ ವಿಭಜನೆಗೆ ಸಂಭಂದಿಸಿ ಲಭಿಸಿದ ದೂರುಗಳ ಪರಿಹಾರಕ್ಕಾಗಿ ರಾಜ್ಯ ವಿಚಾರಣಾ ಆಯೋಗದಿಂದ ಫೆಬ್ರವರಿ 11 ರಂದು ಬೆಳಗ್ಗೆ 9ಕ್ಕೆ ಕಾಸರಗೋಡು ಮುನ್ಸಿಪಲ್ ಕಾನ್ಫರೆನ್ಸ್ ಸಭಾಂಗಣದಲ್ಲಿ ವಿಚರಣೆ ನಡೆಯಲಿದೆ.
ಕರಡು ವಾರ್ಡು ಯಾ ವಿಧಾನ ಸಭಾ ಕ್ಷೇತ್ರಗಳ ವಿಭಜನೆಗೆ ಸಂಬಂಧಿಸಿದ ದೂರು ಮತ್ತು ಅಭಿಪ್ರಾಯಗಳ ಕುರಿತಾಗಿ ಅರ್ಜಿ ಸಲ್ಲಿಸಿದವರು ಈ ವಿಚಾರಣೆಯಲ್ಲಿ ಭಾಗವಹಿಸಬಹುದು. ಸಾಮೂಹಿಕ ಅರ್ಜಿ ಸಲ್ಲಿಸಿದವರಿಂದ ಒಬ್ಬ ಪ್ರತಿನಿಧಿಗೆ ಮಾತ್ರ ವಿಚಾರಣೆಗೆ ಹಾಜರಾಗಲು ಅವಕಾಶವಿರಲಿದೆ.
ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್ಗಳ ಗ್ರಾಮ ಪಂಚಾಯಿತಿ, ಕಾಸರಗೋಡು ನಗರಸಭೆ ಸೇರಿದಂತೆ ವಿವಿಧೆಡೆಯಿಂದ 311 ಅರ್ಜಿಗಳು ಲಭಿಸಿದೆ. ಬೆಳಗ್ಗೆ 9ರಿಂದ ಕಾಞಂಗಾಡು ಮತ್ತು ನೀಲೇಶ್ವರ ಬ್ಲಾಕ್ಗಳ ಗ್ರಾಮ ಪಂಚಾಯಿತಿ, ಕಾಞಂಗಾಡು ನಗರಸಭೆ ಸೇರಿ ಒಟ್ಟು 298 ಅರ್ಜಿಗಳ ವಿಚಾರಣೆ ಬೆಳಗ್ಗೆ 11ಕ್ಕೆ ನಡೆಯಲಿದೆ. ಮಂಜೇಶ್ವರ ಮತ್ತು ಪರಪ್ಪ ಬ್ಲಾಕ್ಗಳ ಗ್ರಾಮ ಪಂಚಾಯಿತಿಗಳು ಮತ್ತು ನೀಲೇಶ್ವರ ನಗರಸಭೆಯ 245 ಅರ್ಜಿಗಳನ್ನು ಮಧ್ಯಾಹ್ನ 2ಗಂಟೆಗೆ ಪರಿಗಣಿಸಲಾಗುವುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಪ್ರಕಟಣೆ ತಿಳಿಸಿದೆ.

