ಮಧೂರು: ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಸುಲಭವಾಗಿ ನೀರು ಲಭ್ಯವಾಗಿಸಿ, ಅವುಗಳ ಬಾಯಾರಿಕೆ ತಣಿಸುವ ಮಹತ್ಕಾರ್ಯದಲ್ಲಿ ಅಭಿಯಾನವೊಂದು ನಡೆದುಬರುತ್ತಿದೆ. ಎರ್ನಕುಳಂನ ಶ್ರೀಮನ್ ನಾರಾಯಣನ್ ಮಿಷನ್ ವತಿಯಿಂದ ಈ ಮಹತ್ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಳೆ 12ವರ್ಷಗಳಿಂದ ಕೇರಳಾದ್ಯಂತ ಈ ಸಏವೆಯಲ್ಲಿ ನಿರತರಾಗಿರುವ ಸಸ್ಥೆ ಪಕ್ಷಿಗಳಿಗೆ ನೀರು ಕುಡಿಯುದಕ್ಕಾಗಿ ಉಚಿತವಾಗಿ ಮಣ್ಣಿನ ಪಾತ್ರೆ ವಿತರಿಸುವ ಅಭಿಯಾನ ಹಮ್ಮಿಕೊಂಡಿದೆ. ಕೇರಳದ ಎಲ್ಲ ಹದಿನಾಲ್ಕು ಜಿಲ್ಲೆಗಳಲ್ಲೂ ವಾಹನಗಳ ಮೂಲಕ ಸಾಗಿ, ಪಕ್ಷಿ, ಪ್ರಾಣಿ ಪ್ರಿಯರಿಗೆ ಈ ಮಣ್ಣಿನ ಪಾತ್ರೆಗಳನ್ನು ವಿತರಿಸುತ್ತಾರೆ. ವಾಹನದ ಮೂಲಕ ಮಣ್ಣಿನ ಪಾತ್ರೆಯ ಉಚಿತ ವಿತರಣೆಯ ರಾಜ್ಯಮಟ್ಟದ ಅಭಿಯಾನದ ಅಂಗವಾಗಿ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನ ವಠಾರಕ್ಕೂ ಮಿಷನ್ನ ವಾಹನ ಆಗಮಿಸಿದ್ದು, ದೇವಾಲಯ ವಠಾರದ ಆಸಕ್ತ ಪಕ್ಷಿ-ಪ್ರಾಣಿ ಪ್ರೇಮಿ ಜನತೆಗೆ ಮಣ್ಣಿನ ಪಾತ್ರೆ ವಿತರಿಸಿದ್ದಾರೆ.
ಕೆಲವು ಸಂಘ ಸಂಸ್ಥೆಗಳ ಹಾಗೂ ಸರ್ಕಾರಿ ಕಚೇರಿ ಸಿಬ್ಬಂದಿ ಬೇಸಿಗೆ ಕಾಳದಲ್ಲಿ ತಮ್ಮ ಕಚೇರಿ ವಠಾರದಲ್ಲಿ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಇರಿಸಿ ತಮ್ಮ ಪ್ರಾಣಿ ಸ್ನೇಹ ತೋರುತ್ತಿದ್ದಾರೆ.
ಬೇಸಿಗೆಯಲ್ಲಿ ನೀರು ಲಭ್ಯವಾಗದೆ ಅದೆಷ್ಟೋ ಮೂಕ ಪ್ರಾಣಿಗಳು ಜೀವ ಕಳೆದುಕೊಳ್ಳುವ ಪರಿಸ್ಥಿತಿಯಿದ್ದು, ಇದನ್ನು ತಪ್ಪಿಸಲು ರಾಜ್ಯಾದ್ಯಂತ ಮಣ್ಣಿನ ಪಾತ್ರೆ ವಿತರಿಸುವ ಕಾರ್ಯಕ್ಕೆ ಮಿಷನ್ ಮುಂದಾಗಿದೆ. ಇದುವರೆಗೆ 1.60ಲಕ್ಷ ಮಣ್ಣಿನ ಪಾತ್ರೆಗಳನ್ನು ರಾಜ್ಯಾದ್ಯಂತ ವಿತರಿಸಿರುವುದಾಗಿ ಮಿಷನ್ನಿನ ಕಾರ್ಯಕರ್ತರು ತಿಳಿಸುತ್ತಾರೆ.



