ಕಾಸರಗೋಡು: ಅಚೆ ಇಲಾಖೆಯ ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ಎಲ್ಲರಿಗೂ ವಿಮಾ ಯೋಜನೆಯ ಸೌಲಭ್ಯದ "ಮಹಾಸುರಕ್ಷಾ ಡ್ರೈವ್" ಫೆ. 19ರಿಂದ ರಾಜ್ಯವ್ಯಾಪಕವಾಗಿ ಜಾರಿಗೆ ಬಂದಿದೆ. ಪ್ರತಿ ವ್ಯಕ್ತಿಗೆ ರೂ 1000 ಕ್ಕಿಂತ ಕಡಿಮೆ ವಾರ್ಷಿಕ ಪ್ರೀಮಿಯಂನಲ್ಲಿ 15 ಲಕ್ಷ ರೂ. ವರೆಗೆ ಆರೋಗ್ಯ ರಕ್ಷಣೆ ಒದಗಿಸುವ ಟಾಪ್ ಅಪ್ ಯೋಜನೆ ಇದಾಗಿದ್ದು, 3 ಲಕ್ಷ ರೂ. ಮೊತ್ತದ ಕ್ಯಾನ್ಸರ್ ಕೇರ್ ಯೋಜನೆ, ರೂ.15 ಲಕ್ಷ ಮೊತ್ತದ ಅಪಘಾತ ವಿಮಾ ಯೋಜನೆ ಲಭ್ಯವಿರಲಿದೆ. ದೇಶದಲ್ಲಿ ಅಸಂಘಟಿತ ಕಾರ್ಮಿಕರ ಆರ್ಥಿಕ ಸಬಲೀಕರಣ
ಶ್ಯೂರಿಟಿಗಾಗಿ ರೂ.10 ಲಕ್ಷಗಳ ಅಪಘಾತ ವಿಮಾ ಯೋಜನೆಯಾದ ಅಂತ್ಯೋದಯ ಶ್ರಮಿಕ ಸುರಕ್ಷಾ ಯೋಜನೆ ರಕ್ಷಣೆ ನೀಡುವ ಯೋಜನೆಯಾಗಿದೆ.
ಈ ಮೂಲಕ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ ಅಸಂಘಟಿತ ವಲಯ ಕಾರ್ಮಿಕರಿಗೆ ಸಂಪೂರ್ಣ ವಿಮಾ ಯೋಜನೆಯನ್ನು ಈ ಕಾಲಾವವಧಿಯಲ್ಲಿ ಒಳಪಡಿಸುವುದು ಅಂಚೆ ಇಲಾಖೆ ಗುರಿಯಾಗಿದೆ
ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆದಾರರಿಗೆ ಮಾತ್ರ ಮೇಲಿನ ಯೋಜನೆಗಳಿಗೆ ಸೇರಲು ಸಾಧ್ಯವಿದೆ. ಹೊಸ ಸೇರ್ಪಡೆಗಾಗಿ ಪೆÇೀಸ್ಟ್ ಆಫೀಸ್/ಐಪಿಪಿಬಿ ಏಜೆಂಟ್ ಮೂಲಕ ನೇರವಾಗಿ ಖಾತೆಯನ್ನು ತೆರೆಯಬಹುದಾಗಿದೆ. ಈ ಉಪಯುಕ್ತ ಸೇವೆಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ನಿಟ್ಟನಲ್ಲಿ "ಗ್ರೇಟ್ ಸೆಕ್ಯುರಿಟಿ ಡ್ರೈವ್ 2.0' ಜಾರಿಗೊಳಿಸಲಾಗುತ್ತಿದೆ ಎಂದು ಕಾಸರಗೋಡು ಅಂಚೆ ಅಧೀಕ್ಷಕಿ, ಪಿ.ಆರ್.ಶೀಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

