ಓಫರ್ ಮಿಲಿಟರಿ ಜೈಲು: ಕದನ ವಿರಾಮ ಒಪ್ಪಂದದ ಅನ್ವಯ ಹಮಾಸ್ ಬಂಡುಕೋರರು ಮೂವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ ಇಸ್ರೇಲ್, ಪ್ಯಾಲೆಸ್ಟೀನಿ ಕೈದಿಗಳನ್ನು ಶನಿವಾರ ಬಿಡುಗಡೆ ಮಾಡಿತು.
ಓಫರ್ ಮಿಲಿಟರಿ ಜೈಲಿನಲ್ಲಿ ಸೆರೆಯಲ್ಲಿದ್ದ 32 ಕೈದಿಗಳು ಬಸ್ನಲ್ಲಿ ವೆಸ್ಟ್ಬ್ಯಾಂಕ್ಗೆ ತೆರಳಿದರು.
ಸುಮಾರು 150 ಇತರ ಯುದ್ಧ ಕೈದಿಗಳನ್ನು ಗಾಜಾಗೆ ಕಳುಹಿಸಲಾಗುತ್ತಿದೆ ಅಥವಾ ಗಡೀಪಾರು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ದೀರ್ಘಾವಧಿ ಹಾಗೂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 183 ಪ್ಯಾಲೆಸ್ಟೀನಿಯನ್ ಕೈದಿಗಳು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಯಾವುದೇ ವಿಚಾರಣೆಯಿಲ್ಲದೆ 2023ರ ಅ.7ರಂದು ಬಂಧನಕ್ಕೊಳಗಾಗಿದ್ದ 111 ಜನರು ಇದ್ದಾರೆ ಎಂದು ಪ್ಯಾಲೆಸ್ಟೀನ್ ಅಧಿಕಾರಿಗಳು ತಿಳಿಸಿದ್ದಾರೆ.

