ಮಂಜೇಶ್ವರ: ಇತ್ತೀಚೆಗೆ ನಿಧನರಾದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಹಾಗೂ ಮಪಕ್ತೇಸರರಲ್ಲೋರ್ವರಾಗಿದ್ದ ಈಶ್ವರ ಭಟ್ ತೊಟ್ಟೆತ್ತೋಡಿಯವರಿಗೆ ಶ್ರೀಕ್ಷೇತ್ರದ ಸರ್ವಸಮಿತಿಗಳು ಹಾಗೂ ಭಕ್ತವೃಂದದ ಪರವಾಗಿ ಶ್ರದ್ದಾಂಜಲಿ ಭಾನುವಾರ ನಡೆಯಿತು.
ಶ್ರೀಮಹಾಲಿಂಗೇಶ್ವರ ಸೇವಾಸಮಿತಿ ಅಧ್ಯಕ್ಷ ಸತೀಶ್ಚಂದ್ರ ರೈ ದೇರಂಬಳ ಅವರ ಅಧ್ಯಕ್ಷತೆಯಲ್ಲಿ ಜರಗಿದ ಶ್ರದ್ದಾಂಜಲಿ ಸಭೆಯಲ್ಲಿ ರಾಜಾರಾಮ ರಾವ್ ಮೀಯಪದವು ಕೀರ್ತಿಶೇಷರ ಕೊಡುಗೆಗಳನ್ನು ನೆನಪಿಸಿ ನುಡಿನಮನ ಅರ್ಪಿಸಿದರು. ಮಹಾಲಿಂಗೇಶ್ವರ ಸೇವಾಟ್ರಸ್ಟ್ ನ ಕಾರ್ಯದರ್ಶಿ ಶ್ರೀಧರ ರಾವ್ ಆರ್.ಎಂ. ಮೀಯಪದವು ಸ್ವಾಗತಿಸಿ, ಕೋಶಾಧಿಕಾರಿ ಜಗದೀಶ ಶೆಟ್ಟಿ ಎಲಿಯಾಣ ವಂದಿಸಿದರು. ಟ್ರಸ್ಟ್ ನ ಗೌರವಾಧ್ಯಕ್ಷ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಟ್ರಸ್ಟಿ ಶಂಕರನಾರಾಯಣ ಭಟ್ ಅಡ್ಕತ್ತಿಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಕ್ಷೇತ್ರದ ಸರ್ವಸಮಿತಿಗಳ ಪದಾಧಿಕಾರಿಗಳು, ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

.jpg)

