ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿಯರ್ ಇಗರ್ಜಿಯಲ್ಲಿ ಭಾರತೀಯ ಕೆಥೋಲಿಕ ಯುವ ಸಂಚಲನ ಪೆರ್ಮುದೆ ಘಟಕ ಹಾಗೂ ಕೆಥೋಲಿಕ ಸಭಾ ಘಟಕದ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಫಾ. ಆಲ್ವಿನ್ ಡಿ ಸೋಜ ಕೌಟುಂಬಿಕ ಜೀವನದ ಬಗ್ಗೆ ಮಾಹಿತಿ ನೀಡಿದರು. ಬದಿಯಡ್ಕದ ದಂತವೈದ್ಯೆ ಡಾ. ಶರಲ್ ಮಾಡ್ತಾ ಅವರು ಬಾಯಿ ಠಾಗೂ ಹಲ್ಲಿನ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಹೆಣ್ಮಕ್ಕಳು ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಅನಿತಾ ಮೊಂತೆರೋ, ಲಿಲ್ಲಿ ಡಿ ಸೋಜ, ಲವೀನ ಕ್ರಾಸ್ತ ಅವರು ಕೌಟುಂಬಿಕ ಬದುಕಿನಲ್ಲಿ ಮಹಿಳೆಯರ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು. ವೈಎಂಸಿಎ ಪೆರ್ಮುದೆ ಘಟಕದ ವತಿಯಿಂದ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಯಿತು. ಇಗರ್ಜಿಯ ಧರ್ಮಗುರು ಫಾ. ಹೆರಾಲ್ಡ್ ಡಿ ಸೋಜ ವಿಜೇತರಿಗೆ ಬಹುಮಾನ ವಿತರಿಸಿದರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೇರಾ, ಕಾರ್ಯದರ್ಶಿ ಲ್ಯಾನ್ಸಿ ಡಿ ಸೋಜ ಮೊದಲದವರು ಉಪ್ಥ1ತರಿದ್ದರು. ಸವಿತಾ ಮೊಂತೆರೋ ಸ್ವಾಗತಿಸಿದರು. ಲವೀನ ನೊರಿನ್ ಕಾರ್ಯಕ್ರಮ ನಿರೂಪಿಸಿದರು. ಫ್ಲಾವಿಯಾ ಮೊಂತೆರೋ ವಂದಿಸಿದರು.


