ಕುಂಬಳೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಸಂಘಟನಾ ಪ್ರಮುಖ್, ಹಿರಿಯ ಪತ್ರಕರ್ತ ಎಂ.ಕೆ.ಶಂಕರನಾರಾಯಣ ಭಟ್ ಅವರ ಗೌರವಾರ್ಥ ಸಂತಾಪ ಸೂಚಕ ಸಭೆ ಕುಂಬಳೆಯಲ್ಲಿ ಜರುಗಿತು.
ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ , ಕುಟುಂಬ ಪ್ರಬೊಧನ್ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ನಾಯರ್ ಮುಂತಾದವರು ನುಡಿನಮನ ಸಲ್ಲಿಸಿದರು.
ಬಿಜೆಪಿ ಕೇರಳ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ರವೀಂದ್ರನ್, ಸಹಕಾರ ಭಾರತಿಯ ಪ್ರಾಂತ್ಯ ಅಧ್ಯಕ್ಷ ವಕೀಲ ಕರುಣಾಕರನ್ ನಂಬ್ಯಾರ್, ಪ್ರಾಂತ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ರಾಷ್ಟ್ರೀಯ ಸೇವಿಕಾ ಸಮಿತಿ ಪ್ರಾಂತ್ಯ ಬೌದ್ಧಿಕ್ ಪ್ರಮುಖ್ ಸರಿತಾ ದಿನೇಶ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ನೇತಾರ, ಕ್ಯಾಂಪೆÇ್ಕೀ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಐಣ ತೊಟ್ಟೆತ್ತೋಡಿ, ಬಿ.ಎಂ.ಯಸ್.ಕುಂಬಳೆ ವಲಯ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ನೀರೊಳಿಕೆಯ ಶ್ರೀ ಮಾತಾ ಬಾಲಿಕಾ ಆಶ್ರಮದ ಅಧ್ಯಕ್ಷ ತಲೆಂಗಳ ನಾರಾಯಣ ಭಟ್, ಕುಂಬಳೆ ಸೇವಾ ಸಹಕಾರಿ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ರಾಜಾರಾಮ ಕಾಮತ್ ಉಪಸ್ಥಿತರಿದ್ದರು.


