ಈ ಮೂಲಕ ವಿದರ್ಭ ಪ್ರಾಂತ್ಯದ ಜನರ ಬಹಳ ದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಇಂಡಿಯಾ ಟಿ.ವಿ ನ್ಯೂಸ್ ವರದಿ ಮಾಡಿದೆ.
ಏಪ್ರಿಲ್ 16 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ಅವರು ಅಮರಾವತಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
2014ರಲ್ಲೇ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಕಾಮಗಾರಿ ಶುರು ಆಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಕುಂಟುತ್ತಾ ಸಾಗಿತ್ತು.
ಮಾರ್ಚ್ 30 ರಂದು ಅಮರಾವತಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಸಂಚಾರ ನಡೆದಿತ್ತು. ಏಪ್ರಿಲ್ 16 ರಿಂದ ಪ್ರಾರಂಭಿಕವಾಗಿ ಮುಂಬೈ- ಅಮರಾವತಿ ನಡುವೆ ವಿಮಾನಗಳು ಸಂಚರಿಸಲಿವೆ.

