ಕಾಸರಗೋಡು: ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥ ರಾಷ್ಟ್ರಾದ್ಯಂತ ಮೂರು ದಿವಸಗಳ ಶೋಕಾಚರಣೆ ಘೋಷಿಸಲಾಗಿರುವುದರಿಂದ, ಏ. 23ರಂದುಕಾಸರಗೋಡು ಜಿಲ್ಲೆಯ ಪಿಲಿಕೋಡ್‍ನ ಕಾಲಿಕಡವು ಮೈದಾನದಲ್ಲಿ ನಡೆಯುತ್ತಿರುವ 'ನನ್ನ ಕೇರಳ' ಪ್ರದರ್ಶನ-ಮಾರುಕಟ್ಟೆ ಮೇಳ, ಕಲಾ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ರದ್ದುಗೊಳಿಸಲಾಗಿದೆ.
ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯ ತೀರ್ಮಾನದನ್ವಯ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಶೋಕಾಚರಣೆ ಅಂಗವಾಗಿ ಮಂಗಳವಾರ ನಡೆಯಬೇಕಾಗಿದ್ದ ಕಾರ್ಯಕ್ರಮಗಳನ್ನೂ ರದ್ದುಪಡಿಸಲಾಗಿತ್ತು.

