ಕಾಸರಗೋಡು: ಕೇರಳದ ಎಲ್ಲಾ ಲೋಕೋಪಯೋಗಿ ರಸ್ತೆಗಳನ್ನು ಶೀಘ್ರದಲ್ಲೇ ಬಿಎಂಬಿಸಿ ಗುಣಮಟ್ಟದೊಂದಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಮುಹಮ್ಮದ್ ರಿಯಾಸ್ ತಿಳಿಸಿದರು.
ಅವರು'ಕಿಫ್‍ಬಿ'ನಿಧಿಯಿಂದ ನಿರ್ಮಿಸಲಾದ ಕಾಞಂಗಾಡ್ ವಿಧಾನಸಭಾ ಕ್ಷೇತ್ರ,ಕಿನಾನೂರು-ಕರಿಂತಲಂ ಗ್ರಾಮ ಪಂಚಾಯಿತಿ ಹಾಗೂ ಕೋಡೋಂ-ಬೇಲೂರು ಪಂಚಾಯಿತಿ ಮೂಲಕ ಹಾದು ಹೋಗಿರುವ ಕಿಲಿಯಾಳಂ-ವರಂಜೂರು-ಬಾಣಂ-ಕಮ್ಮಡಂ ರಸ್ತೆ ಹಾಗೂ ಕಿಲಿಯಾಳಂ ಕಾಲುವೆಗೆ ಅಡ್ಡ ನಿರ್ಮಿಸಿದ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದರು. ಕೇರಳದ 3ಸಾವಿರ ಕಿ.ಮೀ ಉದ್ದದ ಲೋಕೋಪಯೋಗಿ ರಸ್ತೆಗಳಲ್ಲಿ ಶೇಕಡಾ 60 ರಷ್ಟು ರಸ್ತೆಯನ್ನು ಈಗಾಗಲೇ ಬಿಎಂಬಿಸಿ ಮಾನದಂಡಗಳಿಗೆ ಮೇಲ್ದರ್ಜೆಗೇರಿಸಲಾಗಿದ್ದು, ಉಳಿದವುಗಳನ್ನು ಶೀಘ್ರ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವರು ಹೇಳಿದರು.
ವರಂಜೂರು-ಕಿಲಿಯಾಲಂ ರಸ್ತೆಯ ನವೀಕರಣ ಮತ್ತು ಕಿಲಿಯಾಲಂ ಸೇತುವೆಯ ಪುನ:ನಿರ್ಮಾಣ ಪೂರ್ಣಗೊಂಡಿದ್ದು, ಜನರ ಬಹುದಿನಗಳ ಕನಸು ನನಸಾಗಿದೆ. 10 ಕಿಲೋಮೀಟರ್ ಉದ್ದದ ರಸ್ತೆಯನ್ನು 10 ಮೀಟರ್ ಅಗಲದೊಂದಿಗೆ ಮೇಲ್ದರ್ಜೆಗೇರಿಸಲಾಗಿದ್ದು, ಚರಂಡಿ,ಕಲ್ವರ್ಟ್‍ಗಳು ಸೇರಿದಂತೆ ಉತ್ತಮ ಗುಣಮಟ್ಟದ ಸಬ್-ಬೇಸ್ ಮತ್ತು ಟಾರಿರ್ಂಗ್ ಪದರಗಳೊಂದಿಗೆ ನಿರ್ಮಾಣ ಪೂರ್ಣಗೊಳಿಸಲಾಗಿದೆ.
ಶಾಸಕ ಇ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಮುಖ್ಯ ಅತಿಥಿಯಾಗಿದ್ದರು ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಾಜಿ ಸಂಸದ ಪಿ.ಕರುಣಾಕರನ್ ಉಪಸ್ಥಿತರಿದ್ದರು. ಕೆಆರ್ ಎಫ್ ಬಿ ಕೋಯಿಕ್ಕೋಡ್ ಮುಖ್ಯ ಅಭಿಯಂತರ ಕೆ.ಎ.ಜಯಾ ವರದಿ ಮಂಡಿಸಿದರು.
ಕಾಸರಗೋಡಲ್ಲಿ ರಸ್ತೆ ಅವಲೋಕನ:
ರಾಷ್ಟ್ರೀಯ ಹೆದ್ದಾರಿ-66 ಚಟ್ಪಥ ಅಬಿವೃದ್ಧಿ ಕಾಮಗಾರಿ ಮಹುತೇಕ ಪೂರ್ತಿಗೊಂಡಿದ್ದು, ಸಚಿವ ಮುಹಮ್ಮದ್ ರಿಯಾಸ್ ಅವರು ಚೆಂಗಳ, ಕಾಸರಗೋಡು ಮತ್ತು ಉಪ್ಪಳ ಮೇಲ್ಸೇತುವೆಗಳ ಅವಲೋಕನ ನಡೆಸಿದರು. ತಲಪ್ಪಾಡಿಯಿಂದ ಚೆಂಗಳ ವರೆಗಿನ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ಒಂದನೇ ರೀಚ್ ಬಹುತೇಕ ಪೂರ್ತಿಗೊಂಡಿದ್ದು, ಸರ್ವೀಸ್ ರಸ್ತೆ ಕಾಮಗರಿಯಷ್ಟೇ ಪೂರ್ತಿಗೊಳ್ಳಬೇಕಾಗಿದೆ. 2025 ಡಿಸೆಂಬರ್ ವೇಳೆಗ ಈ ಎಲ್ಲ ಕಾಂಗಾರಿಪೂರ್ತಿಗೊಂಡು ಷಟ್ಪಥ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಲಭ್ಯವಾಗುವ ಸಾಧ್ಯತೆಯಿದೆ.


