ಕಾಸರಗೋಡು : ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕøಷ್ಟತೆಯನ್ನು ಹೆಚ್ಚಿಸಲು ಮತ್ತು ಅವರ ಸೃಜನಶೀಲ ಪ್ರತಿಭೆಯನ್ನು ಉತ್ತೇಜಿಸಲು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ಆಯೋಜಿಸಿದ್ದ 'ಪ್ರೇರಣ'ದಲ್ಲಿ ಅರ್ಥಶಾಸ್ತ್ರ ವಿಭಾಗವು 39 ಅಂಕಗಳನ್ನು ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮಾಜಿ ಉಪಕುಲಪತಿ ಪೆÇ್ರ. ಎಚ್.ವೆಂಕಟೇಶ್ವರಲು ಅವರ ಹೆಸರಿನಲ್ಲಿ ಸ್ಥಾಪಿಸಲಾದ ಉಪಕುಲಪತಿಗಳ ರೋಲಿಂಗ್ ಶೀಲ್ಡನ್ನು ಉಪಕುಲಪತಿ ಪೆÇ್ರ. ಸಿದ್ದು ಪಿ ಅಲಗೂರ್ ಪ್ರದಾನ ಮಾಡಿದರು. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ರೋಲಿಂಗ್ ಶೀಲ್ಡ್ ಸ್ವೀಕರಿಸಿದರು. 'ಪ್ರೇರಣಾ'ಅಂಗವಾಗಿ ಜಸ್ಟ್ ಎ ಮಿನಿಟ್, ಸಾಮಥ್ರ್ಯ ಪರೀಕ್ಷೆ, ಸುಡೋಕು, ಪಾತ್ರಾಭಿನಯ, ಪತ್ರ ಬರವಣಿಗೆ, ರಸಪ್ರಶ್ನೆ, ಚರ್ಚೆ, ಕಿರುಚಿತ್ರ ಮತ್ತು ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ವಿಭಾಗದಿಂದ ಆಯ್ದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬಿಯಾರ್, ಗಾಯಕ ಅಖಿಲ್ ದೇವ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ.ರಾಜೇಂದ್ರ ಪಿಲಾಂಗಟ್ಟ, ಪ್ರೇರಣಾ ಸಂಯೋಜಕ ಡಾ.ಶ್ಯಾಮ್ ಪ್ರಸಾದ್, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಡಾ. ವಿಷ್ಣುಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಹದ್‍ಎನ್.ಟಿ ಉಪಸ್ಥಿತರಿದ್ದರು.

