ಇಂಫಾಲ: ಮಣಿಪುರದ ಬಿಷ್ಣುಪುರ ಮತ್ತು ಜಿರಿಬಮ್ ಜಿಲ್ಲೆಗಳಲ್ಲಿ ನಿಷೇಧಿತ ಸಂಘಟನೆಯ ಇಬ್ಬರು ಉಗ್ರನ್ನು ಭದ್ರತಾ ಪಡೆ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಬಿಷ್ಣುಪುರದ ನಿಂಗ್ತೌಖೋಂಗ್ ಖಾ ಖುನೌನಲ್ಲಿ ನಿಷೇಧಿತ ಸಂಘಟನೆ ಪ್ರೆಪಾಕ್‌ನ ಉಗ್ರನನ್ನು ಬಂಧಿಸಲಾಗಿದೆ.
ಆತನಿಂದ 300ಕ್ಕೂ ಹೆಚ್ಚು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿರಿಬಮ್ ಜಿಲ್ಲೆಯ ಬಿಡ್ಯಾ ನಗರದಲ್ಲಿ ನಿಷೇಧಿತ ಸಂಘಟನೆಯ ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

