ಶಾರ್ಜಾ: ಕಾಸರಗೋಡು ಮೂಲದ ಮುಕ್ರಿ ಇಬ್ರಾಹಿಂ (50) ಎಮಿರೇಟ್‍ನ ಧಾಹಿದ್‍ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೇಕಲ್‍ನ ಪಳ್ಳಿಕ್ಕೆರೆ ಮೌವ್ವಲ್‍ನಲ್ಲಿರುವ ಸೂಪರ್ ಮಾರ್ಕೆಟ್‍ನ ಮಾಲೀಕ ಇಬ್ರಾಹಿಂ, ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ರಾಹಿಂ ಸ್ಥಳದಲ್ಲೇ ಮೃತಪಟ್ಟರು. ಮೃತದೇಹವನ್ನು ಊರಿಗೆ ತರುವ ಪ್ರಕ್ರಿಯೆಗಳು ನಡೆಯುತ್ತಿವೆ. ಶಾರ್ಜಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪತ್ನಿ: ಅಬಿದಾ. ಮಕ್ಕಳು: ಇರ್ಫಾನ್, ಅಸೀಮ್, ಇಫ್ರಾ ಅವರನ್ನು ಅಗಲಿದ್ದಾರೆ.


