ಕಾಸರಗೋಡು: ಕೇರಳ ಸರಕಾರಿ ಸಂಸ್ಥೆಯಾದ ಐ.ಎಚ್.ಆರ್.ಡಿ ಫೆಬ್ರವರಿ ತಿಂಗಳಲ್ಲಿ ನಡೆಸಲಾದ ಒಂದನೇ ಮತ್ತು ಎರಡನೇ ಸೆಮಿಸ್ಟರ್ ಪೆÇೀಸ್ಟ್ ಗ್ರಾಜ್ಯುಯೇಟ್ ಡಿಪೆÇ್ಲಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಪಿ.ಜಿ.ಡಿ.ಸಿ.ಎ, ಡಿಪೆÇ್ಲಮಾ ಇನ್ ಡೇಟಾ ಎಂಟ್ರಿ ಟೆಕ್ನಿಕ್ಸ್ ಆ್ಯಂಡ್ ಆಫೀಸ್ ಆಟೋಮೇಷನ್(ಡಿ.ಡಿ.ಟಿ.ಒ.ಎ), ಡಿಪೆÇ್ಲಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಡಿ.ಸಿ.ಎ), ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರೆರಿ ಆ್ಯಂಡ್ ಇನ್ಫರ್ಮೇಷನ್ ಸಯನ್ಸ್ (ಸಿ.ಸಿ.ಎಲ್.ಐ.ಎಸ್) ಎಂಬೀ ಕೋರ್ಸ್‍ಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ.
ಪರೀಕ್ಷಾ ಫಲಿತಾಂಶ ಮತ್ತು ಅಂಕಗಳ ವಿವರ ಆಯಾ ಪರೀಕ್ಷಾ ಕೇಂದ್ರಗಳನ್ನು ಸಂಪರ್ಕಿಸುವ ಮೂಲಕ ಪಡೆಯಬಹುದು. ಪರೀಕ್ಷಾ ಫಲಿತಾಂಶಗಳನ್ನು ಐ.ಎಚ್.ಆರ್.ಡಿ ವೆಬ್‍ಸೈಟ್‍ನಲ್ಲಿ (www.ihrd.ac.in) ಪ್ರಕಟಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಅರ್ಜಿಯನ್ನು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ದಂಡವಿಲ್ಲದೆ ಎಪ್ರಿಲ್ 21 ರವರೆಗೆ ಮತ್ತು 200 ರೂ ವಿಳಂಬ ಶುಲ್ಕದೊಂದಿಗೆ ಎಪ್ರಿಲ್ 28 ರವರೆಗೆ ಸಲ್ಲಿಸಬಹುದು. ಜೂನ್ 2025 ರಲ್ಲಿ ನಡೆಯುವ ಪೂರಕ ಪರೀಕ್ಷೆಗೆ ವಿಶೇಷ ಮಂಜೂರಾತಿ ಅಗತ್ಯವಿರುವವರು ತಮ್ಮ ಅರ್ಜಿಗಳನ್ನು ಏ. 21 ರ ಮೊದಲು ಮತ್ತು ಆಯಾ ಸಂಸ್ಥೆಗಳ ಮುಖ್ಯಸ್ಥರ ಮೂಲಕ ಎಪ್ರಿಲ್ 28 ರೊಳಗೆ 200 ರೂ. ವಿಳಂಬ ಶುಲ್ಕದೊಂದಿಗೆ ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಸ್ವೀಕರಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

