ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (20) ಎಂಬಾತ ಶೂಟೌಟ್ ತಗುಲಿ ಗಾಯಗೊಂಡವರು. ಭಾನುವಾರ ಸಂಜೆ ವೇಳೆ ಕಾಡಿನ ನಡುವೆ ದಾರಿಯಲ್ಲಿ ತೆರಳುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಕಾಲಿಗೆ ಗಂಭೀರ ಗಾಯಗೊಂಡ ಸಾವಾದ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಣಿ ಬೇಟೆ ಬಂದವರು ಹಂದಿಗೆ ಗತಿ ಕಾಣಿಸಲು ದಹಾದಿಯಲ್ಲೇ ಸ್ಪೋಟಕ ವಸ್ತು ಇರಿಸಿದ್ದರು ಎನ್ನಲಾಗಿದೆ. ಇದನ್ನು ಗಮಿನಿಸದ ಸವಾದ್ ನಡಕೊಂಡು ಸಾಗುವ ವೇಳೆ ಮೆಟ್ಟಿದ ಕಾರಣ ಅವರಿಗೆ ತಗುಲಿರುವ ಸಾಧ್ಯತೆ ಇದೆ. ಇದರಿಂದ ಅವರು ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೂಟೌಟ್ ಮಾಡಿದ ವ್ಯಕ್ತಿಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ಮಂಜೇಶ್ವರ ಠಾಣಾ ಪೋಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ.


