ಕಾಸರಗೋಡು: ಕರಾವಳಿ ಸಂರಕ್ಷಣಾ ಸಂದೇಶ ಯಾತ್ರೆಯ ಸಮಿತಿ ರಚನಾ ಸಭೆ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜರುಗಿತು. ಡಿಸಿಸಿ ಅಧ್ಯಕ್ಷ ಪಿ.ಎ ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ, ಮುಖಂಡರಾದ ಎ.ಗೋವಿಂದನ್ ನಾಯರ್, ಕೆ. ನೀಲಕಂಠನ್, ಕೆ.ಇ.ಎ ಬಕ್ಕರ್, ಹಾಕಿಂ ಕುನ್ನಿಲ್ ಮೊದಲಾದವರು ಉಪಸ್ಥಿತರಿದ್ದರು.
ಸಮುದ್ರ ಮರಳು ಲೂಟಿ ಕೊನೆಗೊಳಿಸಬೇಕು, ಕರವಳಿ ಹೆವೇ ಸೇರಿದಂತೆ ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಕರಾವಳಿ ಸಂರಕ್ಷಣಾ ಸಂದೇಶ ಯಾಥ್ರೆ ಹಮ್ಮಿಕೊಳ್ಳಲಾಗಿದೆ.

