ಕಾಸರಗೋಡು: ಕೇರಳ ಸರ್ಕಾರದ ನಾಲ್ಕನೇ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ಉದ್ಘಾಟನೆ ನಡೆಯುವ ಕಾಸರಗೋಡು ಜಿಲ್ಲೆಯಲ್ಲಿ ನನ್ನ ಕೇರಳ ಪ್ರದರ್ಶನ, ಮಾರಾಟ ಮೇಳ ವೇದಿಕೆಯಾದ ಪಿಲಿಕೋಡು ಕಾಲಿಕಡವು ಮೈದಾನವನ್ನು ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಸಂದರ್ಶಿಸಿದರು. ಏ.21 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಭೆಯ ವೇದಿಕೆಯಾದ ಬೇಕಲ್ ಕ್ಲಬ್ ಕೂಡಾ ಸಂದರ್ಶಿಸಿದರು.
ಎಡಿಎಂ ಪಿ.ಅಖಿಲ್, ಡೆಪ್ಯುಟಿ ಕಲೆಕ್ಟರ್ ಲೀಪು ಎಸ್.ಲಾರೆನ್ಸ್, ಕೆಡಿಪಿ ವಿಶೇಷಾಧಿಕಾರಿ ವಿ.ಚಂದ್ರನ್, ಸಿ.ಐ.ಸಿ. ಜನರಲ್ ಮೆನೇಜರ್ ಕೆ.ಸಜಿತ್ ಕುಮಾರ್, ಕಿಫ್ಬಿ ಯು.ಎಲ್.ಸಿ.ಸಿ. ಪ್ರತಿನಿಧಿಗಳು, ಪಿ.ಪಿ.ಪ್ರಸನ್ನ ಕುಮಾರಿ, ಪ್ರದೀಪ್, ಎಂ.ಮಧುಸೂದನನ್ ಮೊದಲಾದವರಿದ್ದರು.

.jpg)
