ಕಾಸರಗೋಡು: ಬ್ಲಾಕ್ ಪಂಚಾಯತಿ 2024-25 ನೇ ಸಾಲಿನ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಪರಿಶಿಷ್ಟ ಜಾತಿ ಯುವಜನ ಸಂಘಟನೆಗಳಿಗೆ ವಾದ್ಯೋಪಕರಣಗಳನ್ನು ವಿತರಿಸಲಾಯಿತು.
ಪರಿಶಿಷ್ಟ ಜಾತಿ ವಿಭಾಗದಲ್ಲಿ ಕಲೆ, ಸಾಂಸ್ಕøತಿಕ ರಂಗವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ವಿತರಿಸಿದರು. ಕಾಂಞಂಗಾಡ್ ಬ್ಲಾಕ್ ಪಂಚಾಯತಿ ಅಧ್ಯಕ್ಷ ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಎಂ.ಅಬ್ದುಲ್ ರಹಿಮಾನ್, ಕೆ.ಸೀತಾ, ಎಂ.ವಿಜಯನ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್.ಪ್ರೀತ, ಎ.ದಾಮೋದರನ್, ಕೆ.ವಿ.ರಾಜೇಂದ್ರನ್, ನ್ಯಾಯವಾದಿ ಎಂ.ಕೆ.ಬಾಬುರಾಜ್, ಪುಷ್ಪ, ಲಕ್ಷ್ಮಿ ತಂಬಾನ್, ಶಕೀಲ ಬಶೀರ್, ವಿ.ಗೀತಾ, ಹರಿಕೃಷ್ಣನ್, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

.jpg)
