ಕಾಸರಗೋಡು: ಶಾಲೆಗಳಲ್ಲಿ ಜನಪರ ಸಮಿತಿಗಳು ಇರಬೇಕು ಎಂದು ಕೇರಳ ಸ್ಪೀಕರ್ ಎ.ಎನ್. ಶಂಸೀರ್ ಹೇಳಿದರು.
ಪಿಲಿಕೋಡ್ ಸರ್ಕಾರಿ ಎಲ್.ಪಿ. ಶಾಲೆಗೆ ಹೊಸದಾಗಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಕಟ್ಟಡಕ್ಕೆ 100 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಸಾಮಾನ್ಯ ಶಿಕ್ಷಣ ಇಲಾಖೆಯ 2022-23ನೇ ವಾರ್ಷಿಕ ಯೋಜನೆಯಡಿ 1 ಕೋಟಿ ರೂ.ಮೀಸಲಿಡಲಾಗಿತ್ತು. ಪೆÇೀಷಕರು ತಮ್ಮ ಮಕ್ಕಳನ್ನು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಲು ಪೈಪೆÇೀಟಿ ನಡೆಸುತ್ತಿರುವ ಈ ಸಮಯದಲ್ಲಿ ಸರ್ಕಾರವು ಅತ್ಯುತ್ತಮ ಶೈಕ್ಷಣಿಕ ಮೂಲಸೌಕರ್ಯವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಪ್ರತಿಯೊಂದು ಶಾಲೆಯ ಪ್ರಗತಿಯಲ್ಲಿ ಸರ್ಕಾರದ ಜೊತೆಗೆ ರಾಜ್ಯದ ಜನರು ಮತ್ತು ಶಿಕ್ಷಕರು ಸಹ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು. ಪಂಚಾಯತಿ ಕೇಂದ್ರಿತವಾಗಿ ಹಳ್ಳಿಗಳಲ್ಲಿ ಜನ ಸಮಿತಿಗಳನ್ನು ರಚಿಸಬೇಕು ಮತ್ತು ಮಕ್ಕಳಿಗೆ ಆಟದ ಮೈದಾನಗಳು ಮತ್ತು ಗ್ರಂಥಾಲಯಗಳಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಮಕ್ಕಳಲ್ಲಿ ಪತ್ರಿಕೆ ಓದುವ ಅಭ್ಯಾಸವನ್ನು ಮೂಡಿಸಲು ಶಿಕ್ಷಕರು ಮತ್ತು ಪೆÇೀಷಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಅಕ್ಷರಗಳು ಮತ್ತು ಸಂಖ್ಯೆಗಳನ್ನು ತಿಳಿದಿರುವ ಪೀಳಿಗೆ ಬೆಳೆಯಬೇಕು ಮತ್ತು ಇದೇ ವೇಳೆ, ಮಕ್ಕಳು ಇಂಗ್ಲಿಷ್ ಭಾಷೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಕಡೆಯಿಂದ ಉತ್ತಮ ತಂಡದ ಕೆಲಸ ಇರಬೇಕು ಎಂದು ಸ್ಪೀಕರ್ ಗಮನಸೆಳೆದರು.
ಶಾಸಕ ಎಂ ರಾಜಗೋಪಾಲನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ. ಸಜಿತ್ ಅಭಿವೃದ್ಧಿ ಚಟುವಟಿಕೆಗಳ ವರದಿ ಮಂಡಿಸಿದರು. ಮುಖ್ಯೋಪಾಧ್ಯಾಯಿನಿ ಸಿ.ಶೋಭನ ಚಟುವಟಿಕೆ ವರದಿ ಮಂಡಿಸಿದರು. ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯಾರ, ಜಿಲ್ಲಾ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು, ಪಿಲಿಕೋಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಕೃಷ್ಣನ್, ಪುಲಿಕೋಡು ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ವಿ. ಸುಲೋಚನಾ, ನೀಲೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ವಿ. ಸುಜಾತ, ಪಿಲಿಕೋಡು ಗ್ರಾಮ ಪಂಚಾಯಿತಿ ಸದಸ್ಯ ಕೆ.ಭಜಿತ್, ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಟಿ.ವಿ.ಮಧುಸೂದನನ್, ವಿದ್ಯಾಕಿರಣಂ ಸಂಯೋಜಕ ಎಂ.ಸುನೀಲ್ ಕುಮಾರ್ ಚೆರುವತ್ತೂರು, ಉಪಜಿಲ್ಲಾ ಶಿಕ್ಷಣಾಧಿಕಾರಿ ರಮೇಶ ಪುನ್ನತಿರಿಯನ್, ಬಿ.ಆರ್.ಸಿ. ಸಂಯೋಜಕ ವಿ.ವಿ. ಸುಬ್ರಮಣ್ಯಂ, ಡಯಟ್ ಅಧ್ಯಾಪಕರಾದ ಎ.ಪ್ರಸನ್ನ, ಪಿ.ಕುಂಞÂ್ಞ ಕಣ್ಣನ್, ಎಂ.ಪಿ. ಮನೋಹರನ್, ಸಿ. ಭರತನ್, ಎ.ವಿ. ಕುಂಞÂ್ಞ ಕೃಷ್ಣನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ. ರಾಜೀವನ್, ಮದರ್ ಪಿ.ಟಿ.ಎ ಅಧ್ಯಕ್ಷೆ ಎಂ. ಸುಜಿತಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಮಾರಿ ಪಿ.ಪಿ.ಪ್ರಸನ್ನ ಕುಮಾರಿ ಸ್ವಾಗತಿಸಿ, ಪಿಟಿಎ ಅಧ್ಯಕ್ಷ ಕೆ. ಪ್ರಜು ವಂದಿಸಿದರು.

.jpeg)
.jpeg)
