ಕಾಸರಗೋಡು: ಪೋಷಕರು ಮಕ್ಕಳ ಮೇಲೆ ಓದಲು ಹಾಕುವ ಒತ್ತಡವನ್ನು ಕಡಿಮೆ ಮಾಡಿ ಆಟದ ಮೂಲಕ ಬೆಳೆಯಲು ಅವಕಾಶ ನೀಡಬೇಕು ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಕ್ಕಳನ್ನು ತಂತ್ರಜ್ಞಾನದ ಸ್ನೇಹಿತರನ್ನಾಗಿ ಬೆಳೆಸಬೇಕು ಎಂದು ಸ್ಪೀಕರ್ ಎಂ.ಎ.ಶಂಸೀರ್ ಹೇಳಿದರು.
ಚಂದೇರ ಜಿಯುಪಿಎಸ್ ಶಾಲೆಯ 111ನೇ ವಾರ್ಷಿಕೋತ್ಸವ ಆಚರಣೆ ಮತ್ತು ನವೀಕರಿಸಿದ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಪೆÇೀಷಕರು ತಮ್ಮ ಮಕ್ಕಳಿಗೆ ನಿರ್ದಿಷ್ಟ ಪ್ರಮಾಣದ ಸ್ಕ್ರೀನ್ ಸಮಯವನ್ನು ನಿಗದಿಪಡಿಸಬೇಕು ಎಂದು ಅವರು ನಿರ್ದೇಶಿಸಿದರು. ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಒಂದು ವಿಷಯವಾಗಿ ಸೇರಿಸಬೇಕು ಮತ್ತು ಶಿಕ್ಷಕರು ಅದನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗಬೇಕು ಎಂದು ಅವರು ಗಮನಸೆಳೆದರು. ಶಾಲೆಗಳು ದಿನಪತ್ರಿಕೆ ಓದುವ ಅಭ್ಯಾಸವನ್ನು ಬೆಳೆಸಬೇಕು ಮತ್ತು ಮಕ್ಕಳು ಇಂಗ್ಲಿಷ್ ಭಾಷೆಯನ್ನು ನಿಭಾಯಿಸಲು ಅನುವು ಮಾಡಿಕೊಡಬೇಕು ಎಂದು ಅವರು ಹೇಳಿದರು.
ಶಾಸಕ ಎಂ ರಾಜಗೋಪಾಲನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಲೋಕೋಪಯೋಗಿ ಕಟ್ಟಡ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಜಿತ್ ಎಂ. ಮತ್ತು ಎಲ್‍ಎಸ್‍ಜಿಡಿ ಅಧಿಕೃತರು ಭಾಗವಹಿಸಿದ್ದರು. ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶೈನಿ ನಾರಾಯಣನ್ ಪಿಳ್ಳೈ ವರದಿ ಮಂಡಿಸಿದರು. ಜಿಲ್ಲಾ ಪಂಚಾಯತ್ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಮನು, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎ. ಕೃಷ್ಣನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಲೋಚನಾ ವಿ, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ವಿ. ಚಂದ್ರಮತಿ, ಬ್ಲಾಕ್ ಪಂಚಾಯತಿ ಸದಸ್ಯ ಎಂ.ವಿ. ಸುಜಾತಾ, ಪಂಚಾಯತಿ ಸದಸ್ಯರಾದ ರಹೀನಾ ಪಿ.ಕೆ, ರವೀಂದ್ರನ್ ಮಾಣಿಯಾಟ್, ರೇಶನಾ ಪಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ವಿ.ಚಂದ್ರನ್, ವಿದ್ಯಾಕಿರಣಂ ಮಿಷನ್ ಜಿಲ್ಲಾ ಸಂಯೋಜಕ ಎಂ. ಸುನೀಲ್ ಕುಮಾರ್, ಚೆರುವತ್ತೂರು ಎಇಒ ರಮೇಶನ್ ಪುನ್ನತಿರಿಯನ್, ಬಿಪಿಸಿ ವಿವಿ ಸುಬ್ರಮಣಿಯನ್, ರಾಜಕೀಯ ಪ್ರತಿನಿಧಿಗಳಾದ ಎಂ.ವಿ. ಕೋಮನ್ ನಂಬಿಯಾರ್, ಕೆ.ಎಂ. ವಿಜಯನ್, ವಿ.ಎಂ. ಕುಮಾರನ್, ಕರೀಂ ಚಂದೇರ, ನಿಶಾಮ್ ಪಟೇಲ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ವಿ. ನಾರಾಯಣನ್, ಪಿ.ಟಿ.ಎ. ಅಧ್ಯಕ್ಷ ಸಿ. ಪ್ರದೀಪನ್, ಎಸ್‍ಎಂಸಿ ಅಧ್ಯಕ್ಷ ಆರ್. ವಿನೋದ್, ಮದರ್ ಪಿ.ಟಿ.ಎ. ಅಧ್ಯಕ್ಷೆ ಪಿ.ಶೈಮಾ ಮತ್ತಿತರರು ಮಾತನಾಡಿದರು. ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ. ಪ್ರಸನ್ನ ಕುಮಾರಿ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಎಂ.ವಿ. ಚಂದ್ರನ್ ವಂದಿಸಿದರು.

.jpeg)
.jpeg)
