ಕೊಟ್ಟಾಯಂ: ಕೊಟ್ಟಾಯಂ ವೆಸ್ಟ್ ಪೋಲೀಸ್ ಠಾಣೆಯಲ್ಲಿ ಗ್ರೇಡ್ ಎಸ್. ಐ ಅನೀಶ್ ವಿಜಯನ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿದೆ. ಅವರು ಮೊನ್ನೆಯಿಂದ(ಶುಕ್ರವಾರ) ಕಾಣೆಯಾಗಿದ್ದಾರೆ.
ವಿಜಯನ್ ಬುಧವಾರ ಮತ್ತು ಗುರುವಾರ ರಜೆಯಲ್ಲಿದ್ದರು. ಆದರೆ ಅವರು ಶುಕ್ರವಾರ ಕರ್ತವ್ಯದಲ್ಲಿದ್ದರು. ಆ ನಂತರ ಅವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.
ಅನೀಶ್ ವಿಜಯನ್ ಪತ್ತನಂತಿಟ್ಟದ ಕೀಜು ವಾಕೂರಿನವರು. ಯಾವುದೇ ಮಾಹಿತಿ ಇದ್ದಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ತಿಳಿಸಬೇಕೆಂದು ಪೋಲೀಸ್ ಪ್ರಕಟಣೆ ತಿಳಿಸಿದೆ.


