HEALTH TIPS

ರಾಜ್ಯದಲ್ಲಿ ಜಿಸಿಸಿಗಳನ್ನು ಸ್ಥಾಪಿಸಲು ಮಾತುಕತೆಯಲ್ಲಿ 30 ಬಹುರಾಷ್ಟ್ರೀಯ ಕಂಪನಿಗಳು: ಕೇರಳದಲ್ಲಿ ಐಟಿ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳು

ತಿರುವನಂತಪುರಂ: ಕೇರಳದ ಐಟಿ ಪಾರ್ಕ್‍ಗಳು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪ್ರಮುಖ ಉತ್ಕರ್ಷಕ್ಕೆ ಸಜ್ಜಾಗುತ್ತಿವೆ. ಐಟಿ ಮತ್ತು ಐಟಿಇಎಸ್ ವಲಯಗಳಲ್ಲಿ ಸುಮಾರು ಮೂವತ್ತು ಬಹುರಾಷ್ಟ್ರೀಯ ಕಂಪನಿಗಳು ಕೇರಳದಲ್ಲಿ ತಮ್ಮ ಜಾಗತಿಕ ಸಾಮಥ್ರ್ಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರದೊಂದಿಗೆ ಚರ್ಚೆಯಲ್ಲಿವೆ.

ಇವುಗಳಲ್ಲಿ ಅಔಒPಐಙ, ಉIಂಓಖಿ ಇಂಉಐಇ, ಮತ್ತು ಒIಅಖಔPಔಐIS ನಂತಹ ಪ್ರಮುಖ ಕಂಪನಿಗಳು ಸೇರಿವೆ.

ಜಾಗತಿಕ ಸಾಮಥ್ರ್ಯ ಕೇಂದ್ರಗಳು (ಜಿಸಿಸಿಗಳು) ಬಹುರಾಷ್ಟ್ರೀಯ ಕಂಪನಿಗಳು ತಮಗೆ ಅಗತ್ಯವಿರುವ ಮಾನವ ಸಂಪನ್ಮೂಲಗಳನ್ನು ಪಡೆಯಬಹುದಾದ ಸ್ಥಳಗಳಲ್ಲಿ ಸ್ಥಾಪಿಸುವ ಕೇಂದ್ರಗಳಾಗಿವೆ. ಭಾರತದಲ್ಲಿ, ರಾಜ್ಯ ಸರ್ಕಾರಗಳು ಬೃಹತ್ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜಿಸಿಸಿಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತಿವೆ.


ಫಸ್ಟ್ ಮೆರಿಡಿಯನ್ ಬಿಸಿನೆಸ್ ಸರ್ವೀಸಸ್‍ನ ಇತ್ತೀಚಿನ ವರದಿಯ ಪ್ರಕಾರ, 2030 ರ ವೇಳೆಗೆ ಭಾರತದಲ್ಲಿ ಜಿಸಿಸಿ ಗಳು 3 ಮಿಲಿಯನ್ ಜನರಿಗೆ ಉದ್ಯೋಗ ನೀಡಲಿವೆ ಎಂದು ಅಂದಾಜಿಸಲಾಗಿದೆ. 2026 ರಲ್ಲಿ ಮಾತ್ರ 1.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಕೇರಳ ಸರ್ಕಾರ ರಚಿಸಿದ ಹೈ ಪವರ್ ಐಟಿ ಸಮಿತಿ ಮತ್ತು ಎಚ್.ಆರ್. ಏಜೆನ್ಸಿಗಳ ಒಕ್ಕೂಟವು ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಇವುಗಳಲ್ಲಿ ಹೊಸ ಕಂಪನಿಗಳು ಮತ್ತು ಅಸ್ತಿತ್ವದಲ್ಲಿರುವ ಜಿಸಿಸಿ ಕಂಪನಿಗಳು ಸೇರಿವೆ. ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಆಸಕ್ತಿ ಹೊಂದಿರುವ ಕಂಪನಿಗಳನ್ನು ಸಹ ಸೇರಿಸಲಾಗುವುದು ಎಂದು ರಾಜ್ಯ ಐಟಿ ಕಾರ್ಯದರ್ಶಿ ಸಾಂಬಶಿವ ರಾವ್ ಹೇಳಿದರು.

ಹಲವಾರು ಪ್ರಮುಖ ಕಂಪನಿಗಳು ಈಗಾಗಲೇ ಕೇರಳದಲ್ಲಿ ತಮ್ಮ ಜಿಸಿಸಿಗಳನ್ನು ಸ್ಥಾಪಿಸಿವೆ. ಅವರ ಉಪಸ್ಥಿತಿಯು ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳಲ್ಲಿ ರಾಜ್ಯದ ಸಾಮಥ್ರ್ಯವನ್ನು ಬಲಪಡಿಸುತ್ತದೆ ಎಂದು ಸಾಂಬಶಿವ ರಾವ್ ಗಮನಸೆಳೆದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries