ಕೊಚ್ಚಿ: ಅಸ್ಸಾಂ ಮೂಲದವರ ಮೊಬೈಲ್ ಪೋನ್ನಲ್ಲಿ ಪಾಕಿಸ್ತಾನಿ ಪೋನ್ ಸಂಖ್ಯೆಗಳಿರುವ ವಾಟ್ಸಾಪ್ ಗ್ರೂಪ್ ಪತ್ತೆಯಾಗಿದೆ.
ಮುಬಾರಕ್ ಹುಸೇನ್ ಎಂಬ ವಲಸೆ ಕಾರ್ಮಿಕನ ಪೋನ್ನಲ್ಲಿ ಅನುಮಾನಾಸ್ಪದ ವಾಟ್ಸಾಪ್ ಗ್ರೂಪ್ ಪತ್ತೆಯಾಗಿದೆ. ಪೆರುಂಬವೂರ್ ಪೋಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತೊಂದು ಘಟನೆಯ ಕುರಿತು ಪೋಲೀಸರಿಗೆ ದೂರು ನೀಡಲು ಮುಬಾರಕ್ ಹೋದಾಗ ಪೋಲೀಸರು ಆತನ ಪೋನ್ ಪರಿಶೀಲಿಸಿದಾಗ ಸಂಶಯಾಸ್ಪದ ಗುಂಪು ಕಂಡುಬಂತು.
ಮುಬಾರಕ್ ಹುಸೇನ್ ನಿನ್ನೆ ಪೆರುಂಬವೂರ್ ಪೋಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದರು, ಅವರು ಇಸ್ಪೀಟೆಲೆ ಆಡುತ್ತಿದ್ದಾಗ ಜನರ ಗುಂಪೆÇಂದು ಆತನನ್ನು ಥಳಿಸಿದ್ದಾರೆ ಎಂದು ಹೇಳಿದ್ದರು. ಆದರೆ, ಮುಬಾರಕ್ ವರ್ತನೆಯಿಂದ ಅನುಮಾನಗೊಂಡ ಪೋಲೀಸರು ಆತನಿಂದ ಪೋನ್ ತೆಗೆದುಕೊಂಡು ಪರಿಶೀಲಿಸಿದರು. ಈ ಸಮಯದಲ್ಲಿ ಪಾಕಿಸ್ತಾನಿ ಸಂಖ್ಯೆಯ ಗ್ರೂಪ್ ಅಡ್ಮಿನ್ ಪೋಲೀಸರ ಗಮನಕ್ಕೆ ಬಂತು.
ಈ ಗ್ರೂಪ್ ಅಪ್ರಾಪ್ತ ಮಕ್ಕಳ ನಗ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿತ್ತು. ಮಕ್ಕಳ ನಗ್ನ ಚಿತ್ರಗಳನ್ನು ಹೊಂದಿದ್ದಕ್ಕಾಗಿ ಪೋಲೀಸರು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಪಾಕಿಸ್ತಾನಿ ಸಂಖ್ಯೆಗಳ ವಿಷಯವನ್ನು ಸ್ಪಷ್ಟಪಡಿಸಲು ಆರೋಪಿಯನ್ನು ಎಟಿಎಸ್ ಮತ್ತು ಐಬಿ ವಿಚಾರಣೆ ನಡೆಸುತ್ತಿದೆ.



