ನವದೆಹಲಿ: ಪಾಕಿಸ್ತಾನದ ಧ್ವಜಗಳು ಮತ್ತು ಸಂಬಂಧಿತ ಸರಕುಗಳನ್ನು ಭಾರತದಲ್ಲಿ ಮಾರಾಟ ಮಾಡಿರುವ ಸಂಬಂಧ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಉಬುಯಿಇಂಡಿಯಾ, ಎಟ್ಸಿ, ದಿ ಫ್ಲಾಗ್ ಕಂಪನಿ ಮತ್ತು ದಿ ಫ್ಲಾಗ್ ಕಾರ್ಪೊರೇಶನ್‌ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಔಪಚಾರಿಕ ನೋಟಿಸ್ ಜಾರಿಗೊಳಿಸಿದೆ
ಪಾಕಿಸ್ತಾನದ ಧ್ವಜ ಮತ್ತು ಸಂಬಂಧಿತ ಸರಕುಗಳನ್ನು ತಮ್ಮ ಮಾರಾಟದ ಪಟ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ತೆಗೆದುಹಾಕಲು ಮತ್ತು ಭಾರತೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ಕಂಪನಿಗಳಿಗೆ ಸಿಸಿಪಿಎ ನಿರ್ದೇಶಿಸಿದೆ.


