ಕಾಸರಗೋಡು: ಹಳೆಯ ಬಸ್ ನಿಲ್ದಾಣದಲ್ಲಿರುವ ಸಪ್ಲೈಕೋ ಪೀಪಲ್ಸ್ ಬಜಾರ್ನಲ್ಲಿ ಆಯೋಜಿಸಲಾದ ಸಪ್ಲೈಕೋ ಶಾಲಾ ಮೇಳವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಜನಸಾಮಾನ್ಯರಿಗೆ ಅನುಕೂಲಕರವಾಗುವ ರೀತಿಯಲ್ಲಿ ಸಪ್ಲೈಕೋ ಮಾಡಿರುವ ಇಂತಹ ವ್ಯವಸ್ಥೆ ಸ್ತುತ್ಯರ್ಹ. ಜನರು ಗರಿಷ್ಠ ಪ್ರಯೋಜನ ಪಡೆದಾಗ ಉದ್ದೇಶ ಸಾಕಾರವಾಗುತ್ತದೆ ಎಂದು ಉದ್ಘಾಟಿಸಿದ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಅಗತ್ಯವಿರುವ ನೋಟ್ಬುಕ್ಗಳು, ಬ್ಯಾಗ್ಗಳು, ನೀರಿನ ಬಾಟಲಿ ಸಹಿತ ಇತರ ಕಲಿಕೋಪಕರಣಗಳು ಇತ್ಯಾದಿಗಳು ಎಲ್ಲಾ ಸಪ್ಲೈಕೋ ಮಳಿಗೆಗಳಲ್ಲಿ ಸಾಮಾನ್ಯ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಸಮಾರಂಭದಲ್ಲಿ ಡಿಪೋ ವ್ಯವಸ್ಥಾಪಕ ರವೀಂದ್ರನ್ ಸ್ವಾಗತಿಸಿ, ಔಟ್ಲೆಟ್ ವ್ಯವಸ್ಥಾಪಕ ಆರ್. ವಿಜಯಕುಮಾರ್ ವಂದಿಸಿದರು.

.jpeg)
