ಮಂಜೇಶ್ವರ: ಆನ್‍ಲೈನ್ ಟ್ರೇಡಿಂಗ್ ಹೆಸರಲ್ಲಿ 18ಲಕ್ಷ ರೂ. ಎಗರಿಸಲು ಸಹಾಯ ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೀಯಪದವು ಬೆಜ್ಜಂಗಳ ನಿವಾಸಿ ಬಿ.ರಸಿಯಾ(40) ಹಾಗೂ ಈಕೆ ಸಹೋದರ ಅಬ್ದುಲ್ ರಾಶಿದ್(38)ಎಂಬವರ ವಿರುದ್ಧ ಎರುಮೇಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎರುಮೇಲಿ ಚೆನಪ್ಪಾಡಿ ನಿವಾಸಿ ಯುವಕನ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಪ್ರಕರಣದ ಮುಖ್ಯ ಆರೋಪಿಗಳಾಗಿರುವ ಇತರ ಇಬ್ಬರು ತಮ್ಮ ವಾಟ್ಸಪ್ ಗ್ರೂಪ್ ಮೂಲಕ ಎರುಮೇಲಿಯ ದೂರುಗಾರ ಯುವಕನನ್ನು ಪರಿಚಯಮಾಡಿಕೊಂಡಿದ್ದರು. ಆನ್‍ಲೈನ್ ಟ್ರೇಡಿಂಗ್‍ಗಾಗಿ ಈ ಇಬ್ಬರ ಬ್ಯಾಂಕ್ ಖಾತೆಗಳಿಗೆ ದೂರುದಾರ ಯುವಕ ತನ್ನ ವಿವಿಧ ಬ್ಯಾಂಕ್ ಖಾತೆಗಳಿಂದ 19.24ಲಕ್ಷ ರೂ. ಕಳುಹಿಸಿಕೊಟ್ಟಿದ್ದನು.
ಯುವಕನಿಂದ ಹಣ ಪೀಕಿಸಲು ಮೀಯಪದವಿನ ರಸಿಯಾ ಹಾಗೂ ಅಬ್ದುಲ್ ರಶೀದ್ ವಂಚನಾತಂಡಕ್ಕೆ ಸಹಾಯ ಒದಗಿಸಿದ್ದರು. ಇದಕ್ಕೆ ಪ್ರತಿಯಾಗಿ ತಂಡ ರಸಿಯಾ ಹಾಗೂ ಅಬ್ದುಲ್ ರಶೀದ್ ಅವರ ಬ್ಯಾಂಕ್ ಖಾತೆಗೆ ತಲಾ 5.20ಲಕ್ಷ ರೂ. ಕಳುಹಿಸಿಕೊಟ್ಟಿರುವುದು ತನಿಖೆಯಲ್ಲಿ ಸ್ಪಷ್ಟಗೊಂಡಿತ್ತು. ಎರುಮೇಲಿ ಪೊಲೀಸ್ ಠಾಣೆ ಎಸ್.ಐ ರಾಜೇಶ್ ಟಿ. ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರಿಸಿದೆ.

