ಮಂಜೇಶ್ವರ: ಮಜಿಬೈಲು ನರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಒಂದನೇ ತರಗತಿಗೆ ದಾಖಲಾದ ಮಕ್ಕಳನ್ನು ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಿರ್ವಾಹ ಸಮಿತಿ ಅಧ್ಯಕ್ಷೆ ವಿನಯ ವಹಿಸಿದ್ದರು. ಮಜಿಬೈಲು ವಾರ್ಡು ಸದಸ್ಯೆ ಆಶಾಲತ ಬಿ.ಎಂ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭೆಯಲ್ಲಿ ಮಾತೃ ಸಂಘದ ಅಧ್ಯಕ್ಷೆ ಶೋಭಾ, ನಿವೃತ್ತ ಎ.ಇ.ಒ ಎಂ.ಜಿ. ನಾರಾಯಣ ರಾವ್, ಜಗದೀಶ ಚೇತನ ನಗರ, ರಾಜೇಶ್ ಚೇತನ್ ನಗರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ ಎಂ ಮೊದಲಾರವರು ಉಪಸ್ಥಿತರಿದ್ದರು. ಶಿಕ್ಷಕ ದೇವಾನಂದರು ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸುರೇಶ ಬಂಗೇರ ಶಾಲಾ ವ್ಯವಸ್ಥೆಗಳ ಬಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾಮಕ್ಕಳಿಗೆ ದಾನಿಗಳ ನೆರವಿನೊಂದಿಗೆ ಬ್ಯಾಗ್ ಹಾಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಶಿಕ್ಷಕಿ ಅಶ್ವಿನಿ ಟೀಚರ್ ವಂದಿಸಿದರು. ಶಾಲಾಮಕ್ಕಳಿಗೆ ಕಲಿಕೋಪಕರಣ ವಿತರಿಸಿದ ರಾಜೇಶ, ಜಗದೀಶ, ದಯಾನಂದ, ನೌಶಾದ್, ಬಾಲಕೃಷ್ಣ ಶೆಟ್ಟಿ, ಎಂ.ಪಿ.ಅಲಿ ಹಾಜಿ, ಕೊರಗಪ್ಪ, ತಮ್ಮಣ್ಣ ಮೇಸ್ತಿ, ಹರೀಶ್ ನಾಯಕ್, ದಿನೇಶ ಎಂ. ಇವರನ್ನು ಅಭಿನಂದಿಸಲಾಯಿತು.


