HEALTH TIPS

ಗುವಾಹಟಿ | ಪಂಗಲ್‌ ಸಮುದಾಯದ ವ್ಯಕ್ತಿ ಮೃತದೇಹ ಪತ್ತೆ: ಕೆರಳಿದ ಜನ

ಗುವಾಹಟಿ: 'ಪಂಗಲ್‌' ಎಂಬ ಮೈತೇಯಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಂಗವಿಕಲ ವ್ಯಕ್ತಿ ಚೇಸಂ ಅಬ್ದುಲ್‌ ಖಾದಿರ್‌ ಅವರ ಮೃತದೇಹವು ಮಂಗಳವಾರ ಬೆಳಿಗ್ಗೆ ದೊರೆತಿದ್ದು, ಮೈತೇಯಿ ಸಮುದಾಯದವು ಹೆಚ್ಚಿನ ಸಂಖ್ಯೆಯಲ್ಲಿರುವ ಪಶ್ಚಿಮ ಇಂಫಾಲ್‌ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇವರು ಜೂನ್‌ 10ರಿಂದ ಕಾಣೆಯಾಗಿದ್ದರು.

'ಹತ್ಯೆಯ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದು ಪೊಲೀಸರು ಮಾಹಿತಿ ನೀಡಿದರು. ಖಾದಿರ್‌ ಅವರ ಮೃತದೇಹವನ್ನು ಹೊರತೆಗೆಯುತ್ತಿದ್ದಂತೆಯೇ, ಘಟನಾ ಸ್ಥಳದಲ್ಲಿ ಸೇರಿದ್ದ ಜನರು ಭದ್ರತಾ ಪಡೆಗಳತ್ತ ಕಲ್ಲೆಸೆದರು. ಪ್ರತಿಭಟನೆಯನ್ನೂ ನಡೆಸಿದರು. ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿದರು.

ಈ ಪ್ರಕರಣದಕ್ಕೆ ಸಂಬಂಧಿಸಿ ಮೈತೇಯಿ ಬಂಡುಕೋರ ಸಂಘಟನೆ 'ಅರಂಬಾಯ್ ಟೆಂಗೋಲ್‌'ನ ಆರು ಸದಸ್ಯರನ್ನು ಹಾಗೂ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 'ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯೆತೆ ಇದೆ' ಎಂದು ಪೊಲೀಸರು ಹೇಳಿದರು. 'ಮೈತೇಯಿ ಮತ್ತು ಪಂಗಲ್‌ ಸಮುದಾಯಗಳ ಮಧ್ಯೆ ಇರುವ ಸೌಹಾರ್ದವನ್ನು ಹದಗೆಡಿಸಲು ಈ ಹತ್ಯೆ ನಡೆಸಲಾಗಿದೆ' ಎಂದು ಮೈತೇಯಿ ಪಂಗಲ್‌ ಒಕ್ಕೂಟ ಸಮಿತಿಯು ಹೇಳಿಕೆ ಬಿಡುಗಡೆ ಮಾಡಿದೆ.

ಮಣಿಪುರದ ಒಟ್ಟು ಜನಸಂಖ್ಯೆಯಲ್ಲಿ ಪಂಗಲ್‌ ಸಮುದಾಯವು ಶೇ 9ರಷ್ಟಿದೆ. 2023ರಿಂದ ಆರಂಭವಾದ ಜನಾಂಗೀಯ ಸಂಘರ್ಷದಲ್ಲಿ ಈ ಸಮುದಾಯದ ಜನರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಸಂಘರ್ಷದ ವೇಳೆ ಹಲವರು ಮೃತಪಟ್ಟಿದ್ದರೆ, ಹಲವರು ತಮ್ಮ ಮನೆ ಕಳೆದುಕೊಂಡಿದ್ದರು. ಆದರೂ ಈ ಸಮುದಾಯದ ಜನರು ಸಂಘರ್ಷದಿಂದ ದೂರ ಉಳಿದಿದ್ದರು. ಆದರೆ, ಖಾದಿರ್‌ ಅವರ ಹತ್ಯೆಯು ಈ ಸಮುದಾಯದವರನ್ನು ಕೆರಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries