ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಏ.22ರಂದು ನಡೆದಿದ್ದ ಪಾಕ್ ಪೋಷಿತ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತವು ಪಾಕ್ ಮತ್ತದರ ಉಗ್ರರ ವಿರುದ್ಧ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಇಡೀ ಜಗತ್ತೇ ಕಂಡು ಹೌಹಾರಿದೆ. ಅಲ್ಲದೇ ಪಾಕ್ಗೆ ರಾಜತಾಂತ್ರಿಕ ಭಾಗವಾಗಿ ಈಗಾಗಲೇ ಭಾರತ ಸಿಂಧೂ ನದಿ ನೀರು ಒಪ್ಪಂದ ಮುರಿದು ನೀರಿಗೂ ಪಾಕ್ ವಿಲವಿಲ ಒದ್ದಾಡುವಂತೆ ಮಾಡಿದ್ದು ಗೊತ್ತೇ ಇದೆ.
ಇನ್ನೊಂದೆಡೆ ಪಾಕಿಸ್ತಾನವು ಉಗ್ರರನ್ನು ಸಾಕುವ, ಅದರ ನಾಟಕವನ್ನು ಬಟಾಬಯಲು ಮಾಡಲು ಈಗಾಗಲೇ ಭಾರತದ ನಿಯೋಗಳು ವಿವಿಧ ದೇಶಗಳಿಗೆ ತೆರಳಿ ಮನವರಿಕೆ ಮಾಡಿವೆ. ಇದೀಗ ಪಾಕಿಸ್ತಾನ ಕಂಗೆಟ್ಟು, ಭಾರತ ಕೊಟ್ಟ ಏಟಿನಿಂದ ಕಂಗಾಲಾಗಿರುವ ಬಗ್ಗೆ ಮನವರಿಕೆ ಮಾಡಲು ತನ್ನ ನಿಯೋಗವನ್ನು ಲಂಡನ್ಗೆ ಪಾಕ್ ಕಳುಹಿಸಿದೆ.
ಭಾರತದ ಜೊತೆಗಿನ ಸಂಘರ್ಷ ಕುರಿತು ಅಮೆರಿಕಾಗೆ ಈಗಾಗಲೇ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ನಿಯೋಗ ಇಂಗ್ಲೆಂಡ್ಗೆ ಬಂದಿದೆ. ಭಾರತ ನಡೆಸಿದ ಸೇನಾ ಕಾರ್ಯಾಚರಣೆ ಬಗ್ಗೆ ತಿಳಿಸಿವ ರಾಜತಾಂತ್ರಿಕ ಪ್ರಯತ್ನವನ್ನು ಮಾಡುತ್ತಿದೆ.
ಇನ್ಮುಂದೆ ಪಾಕಿಸ್ತಾನ ಶಾಂತಿ ಬಯಸುತ್ತದೆ. ಈ ನಮ್ಮ ಸಂದೇಶ ಸ್ಪಷ್ಟವಾಗಿದೆ. ಸಿಂಧೂ ನದಿ ಒಪ್ಪಂದ ಸೇರಿ ಎಲ್ಲಾ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳಲು ಪಾಕಿಸ್ತಾನ ಬಯಸುತ್ತಿದೆ. ಭಾರತವು ಸಿಂಧೂ ನದಿ ನೀರು ಒಪ್ಪಂದ ಮುರಿದು ಹಾಕಿರುವುದರಿಂದ ಪಾಕ್ನ 24 ಕೋಟಿ ಜನರ ಬದುಕಿಗೆ ಕೊಳ್ಳಿ ಬಿದ್ದಿದೆ. ಇದು ಪಾಕಿಸ್ತಾನದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ನೀವಾದರೂ ಭಾರತದೊಂದಿಗೆ ಮಾತನಾಡಿ ನೀರು ಕೊಡಿಸಿ ಎಂದು ಪಾಕ್ ನಿಯೋಗ ಅಲ್ಲಿ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಭಾರತವು ಮಾತುಕತೆ ಬಯಸಲು ಅಥವಾ ಮೂರನೇ ವ್ಯಕ್ತಿ ಮಧ್ಯಸ್ಥಿಕೆಯನ್ನೂ ಒಪ್ಪುತ್ತಿಲ್ಲ. ಹೀಗಾಗಿ ನಮಗೆ ನೆರವಾಗಿ ಎಂದು ಪಾಕ್ ನಿಯೋಗ ಮನವಿ ಮಾಡಿಕೊಂಡಿದೆ.

