ನವದೆಹಲಿ: ಅಂತರರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಜೌಗು ಪ್ರದೇಶಗಳ ಪಟ್ಟಿಗೆ ಭಾರತದ ಮತ್ತೆರಡು ಪ್ರದೇಶಗಳು ಸೇರ್ಪಡೆಯಾಗುವ ಮೂಲಕ ಒಟ್ಟು ಸ್ಥಳಗಳ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.
ರಾಜಸ್ಥಾನದ ಫಲೋಡಿಯ ಖಿಛಾನ್ ಹಾಗೂ ಉದಯ್‌ಪುರದ 'ಮೇನಾರ್' ಅನ್ನು 'ರಾಮ್ಸರ್' ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಜೌಗು ಪ್ರದೇಶಗಳನ್ನು ಸಂರಕ್ಷಿಸುವ ದೃಷ್ಟಿಯಿಂದ 1971ರಲ್ಲಿ ಇರಾನ್‌ನ 'ರಾಮ್ಸರ್' ಪಟ್ಟಣದಲ್ಲಿ ನಡೆದ ಜಾಗತಿಕ ಸಮಾವೇಶದಲ್ಲಿ ಒಪ್ಪಂದ ಏರ್ಪಟ್ಟಿತ್ತು. ಅಲ್ಲಿಂದ ಸಂರಕ್ಷಿತ ಜೌಗು ಪ್ರದೇಶಗಳನ್ನು 'ರಾಮ್ಸರ್' ಪಟ್ಟಿ ಎಂದು ಗುರುತಿಸಲಾಗುತ್ತದೆ.
ಈ ಕುರಿತು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ,'ಶುಭ ಸುದ್ದಿ. ಪರಿಸರ ಸಂರಕ್ಷಣೆ ಕೆಲಸಗಳು ಅತ್ಯಂತ ವೇಗದಲ್ಲಿ ನಡೆಯುತ್ತಿದ್ದು, ಸಾರ್ವಜನಿಕ ಸಹಭಾಗಿತ್ವದಿಂದ ಸಾಕಾರವಾಗುತ್ತಿದೆ' ಎಂದು ತಿಳಿಸಿದ್ದಾರೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಕೂಡ ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಹೆಚ್ಚುವರಿಯಾಗಿ ಎರಡು ಸ್ಥಳಗಳ ಸೇರ್ಪಡೆಯಿಂದ 91ಕ್ಕೆ ಏರಿಕೆಯಾಗಿದೆ. ಈ ಸಾಧನೆಯು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮಗಳಿಗೆ ಮತ್ತೊಂದು ಪುರಾವೆಯಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ದೇಶದ ಹಸಿರೀಕರಣದ ನಿಟ್ಟಿನಲ್ಲಿ ನೆರವಾಗಲಿದೆ' ಎಂದು ತಿಳಿಸಿದ್ದಾರೆ.
'ರಾಮ್ಸರ್' ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಪ್ರದೇಶಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ಜಾಗತಿಕ ಜೀವವೈವಿಧ್ಯತೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.
'ಮೇನಾರ್'

