HEALTH TIPS

GST rates: ಜಿಎಸ್​​ಟಿಯಲ್ಲಿ ಬದಲಾವಣೆ? ಇನ್ಮುಂದೆ ಇರಲ್ಲವಾ ಶೇ. 12ರ ಟ್ಯಾಕ್ಸ್ ಸ್ಲ್ಯಾಬ್? ಇಲ್ಲಿದೆ ಡೀಟೇಲ್ಸ್

ಜಿಎಸ್​​ಟಿ ಟ್ಯಾಕ್ಸ್ ಸ್ಲ್ಯಾಬ್ ರಚನೆಯಲ್ಲಿ (GST slabs) ಬದಲಾವಣೆ ತರುವ ಸಂಭವ ಇದೆ. ಶೇ. 12ರ ಸ್ಲ್ಯಾಬ್ ಅನ್ನೇ ತೆಗೆದುಹಾಕಲು ಯೋಜಿಸಲಾಗಿದೆ. ಇದೇನಾದರೂ ನಡೆದಲ್ಲಿ ನಾಲ್ಕು ತೆರಿಗೆಗಳಿರುವ ಟ್ಯಾಕ್ಸ್ ಸ್ಲ್ಯಾಬ್ ಮೂರು ತೆರಿಗೆಗಳಿಗೆ ಇಳಿಯಬಹುದು.

ಸದ್ಯ, ಜಿಎಸ್​​ಟಿ ತೆರಿಗೆ ವ್ಯವಸ್ಥೆಯಲ್ಲಿ ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ಟ್ಯಾಕ್ಸ್ ಸ್ಲ್ಯಾಬ್​​ಗಳಿವೆ. ಇದರಲ್ಲಿ ಶೇ. 12ರ ದರ ಸದ್ಯದ ಮಟ್ಟಿಗೆ ಅಪ್ರಸ್ತುತವೆನಿಸಿದೆ. ಹೀಗಾಗಿ, ಈ ದರವನ್ನು ತೆಗೆದುಹಾಕಲು ಜಿಎಸ್​​ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಕೆಲ ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಶೇ. 12ರ ಟ್ಯಾಕ್ಸ್ ಸ್ಲ್ಯಾಬ್ ತೆಗೆದುಹಾಕುವ ನಿರ್ಧಾರಕ್ಕೆ ಸಾಕಷ್ಟು ಬೆಂಬಲ ಸಿಕ್ಕಿದೆಯಂತೆ. ಹೆಚ್ಚಿನ ರಾಜ್ಯಗಳ ಅಧಿಕಾರಿಗಳು, ವಿವಿಧ ತಜ್ಞರು, ಗ್ರೂಪ್ ಆಫ್ ಮಿನಿಸ್ಟರ್ಸ್ ಪ್ರತಿನಿಧಿಗಳು ಈ ಟ್ಯಾಕ್ಸ್ ರದ್ದು ಮಾಡುವ ನಿರ್ಧಾರಕ್ಕೆ ಬೆಂಬಲ ನೀಡಿರುವುದು ತಿಳಿದುಬಂದಿದೆ. ಒಂದು ವೇಳೆ, ಶೇ. 12ರ ಟ್ಯಾಕ್ಸ್ ಸ್ಲ್ಯಾಬ್ ರದ್ದುಗೊಳಿಸಿದ್ದೇ ಆದಲ್ಲಿ, ಆ ತೆರಿಗೆ ಹೊಂದಿರುವ ವಸ್ತುಗಳನ್ನು ಶೇ. 5 ಅಥವಾ ಶೇ. 18ರ ಟ್ಯಾಕ್ಸ್ ಸ್ಲ್ಯಾಬ್​​​ಗಳಿಗೆ ಮರುವಿಂಗಡಣೆ ಮಾಡಲಾಗುತ್ತದೆ.

ಶೇ. 12ರ ಟ್ಯಾಕ್ಸ್ ಸ್ಲ್ಯಾಬ್​​ಗೆ ಬರುವ ಕೆಲ ವಸ್ತುಗಳಿವು…

ಸಾಂದ್ರೀಕೃತ ಹಾಲು, 20 ಲೀಟರ್ ಕುಡಿಯುವ ನೀರಿನ ಬಾಟಲ್, ವಾಕಿ ಟಾಕಿ, ಬ್ಯಾಟಲ್ ಟ್ಯಾಂಕ್, ಕಾಂಟ್ಯಾಕ್ಟ್ ಲೆನ್ಸ್, ಬೆಣ್ಣೆ, ಖರ್ಜೂರ, ಡ್ರೈಫ್ರೂಟ್, ಫ್ರೋಜನ್ ತರಕಾರಿಗಳು, ಜ್ಯಾಮ್, ಜೆಲ್ಲಿ, ಹಣ್ಣಿನ ಜ್ಯೂಸ್, ಟೂತ್ ಪೌಡರ್, ಫೀಡಿಂಗ್ ಬಾಟಲ್, ಕಾರ್ಪೆಟ್, ಛತ್ರಿ, ಟೊಪ್ಪಿ, ಸೈಕಲ್, ಕೆಲ ಗೃಹೋಪಕರಣಗಳು, ಮರದ ಮೇಜು, ಪೆನ್ಸಿಲ್, ಕ್ರೇಯಾನ್, ಹ್ಯಾಂಡ್ ಬ್ಯಾಗ್, ಕಾಟನ್​​ನಲ್ಲಿ ಮಾಡಿದ ಶಾಪಿಂಗ್ ಬ್ಯಾಗ್, 1,000 ರೂ ಒಳಗಿನ ಪಾದರಕ್ಷೆ, ಡಯಾಗ್ನಾಸ್ಟಿಕ್ ಕಿಟ್, ಗ್ರಾನೈಟ್ ಬ್ಲಾಕ್ ಇತ್ಯಾದಿ ವಸ್ತುಗಳು ಶೇ. 12ರ ಟ್ಯಾಕ್ಸ್ ಸ್ಲ್ಯಾಬ್​ನಲ್ಲಿವೆ.

ಕೆಲ ವರ್ಗದ ಸೇವೆಗಳನ್ನು ಶೇ. 12 ಟ್ಯಾಕ್ಸ್ ಸ್ಲ್ಯಾಬ್​​ನಲ್ಲಿ ಒಳಗೊಳ್ಳಲಾಗಿದೆ. ಎಕನಾಮಿ ಅಲ್ಲದ ಕ್ಲಾಸ್​​ಗಳಲ್ಲಿನ ವಿಮಾನ ಪ್ರಯಾಣಕ್ಕೂ ಈ ತೆರಿಗೆ ಇದೆ.

ಜೂನ್ ಅಥವಾ ಜುಲೈನಲ್ಲಿ ಜಿಎಸ್​​ಟಿ ಕೌನ್ಸಿಲ್ ಸಭೆ

ಮುಂಬರುವ ಜಿಎಸ್​​ಟಿ ಕೌನ್ಸಿಲ್ ಸಭೆ ಈ ತಿಂಗಳು ಅಥವಾ ಮುಂದಿನ ತಿಂಗಳು (ಜುಲೈ) ನಡೆಯುವ ಸಾಧ್ಯತೆ ಇದೆ. ಟ್ಯಾಕ್ಸ್ ಸ್ಲ್ಯಾಬ್ ಪರಿಷ್ಕರಣೆ ಸೇರಿದಂತೆ ಇನ್ನೂ ಕೆಲ ಮಹತ್ವದ ನಿರ್ಧಾರಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಬಹುದು. ಕೇಂದ್ರ ಹಣಕಾಸು ಸಚಿವೆ ಹಾಗೂ ವಿವಿಧ ರಾಜ್ಯಗಳ ಹಣಕಾಸು ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries