ಕಾಸರಗೋಡು: "ಕಾಪಾ'ಕಾಯ್ದೆಗೆ ವಿರುದ್ಧವಾಗಿ ವರ್ತಿಸಿದ ಸೌತ್ ಚಿತ್ತಾರಿ ಕೋಳಿಕ್ಕಾಡ್ ಹೌಸ್‍ನ ಸಿ.ಕೆ ಸಹೋರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಡಿಐಜಿ ಆದೇಶ ಪ್ರಕಾರ ಸಾಹಿರ್‍ನನ್ನು ಕಾಪಾ ಕಾಯ್ದೆಯನ್ವಯ ಬಂಧಿಸಿ ನಂತರ ಶರತ್ತು ವಿಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.
ನಿಬಂಧನೆ ಪ್ರಕಾರ ನಿಗದಿತ ದಿನಾಂಕದಂದು ಠಾಣೆಯಲ್ಲಿ ಹಾಜರಾಗಬೇಕಾಗಿದ್ದರೂ, ಠಾಣೆಗೆ ತೆರಳದೆ ಕಾಪಾ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹೊಸದುರ್ಗ ಠಾಣೆ ಇನ್ಸ್‍ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

