ಮುಳ್ಳೇರಿಯ: ಅಸೌಖ್ಯದಿಂದ ಬಳಲುತ್ತಿದ್ದ ಸಹೋದರರಿಬ್ಬರು ಒಂದೇ ದಿನ ನಿಧನರಾಗುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ. ಬೆಳ್ಳೂರು ನಿವಾಸಿಗಳಾದ ಸುಬ್ರಹ್ಮಣ್ಯ ಭಟ್(71)ಮತ್ತು ಇವರ ಸಹೋದರ ಶ್ರೀನಿವಾಸ ಭಟ್(54)ಮೃತಪಟ್ಟವರು.
ಅಲ್ಪ ಕಾಲದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಸುಬ್ರಹ್ಮಣ್ಯ ಭಟ್ ಅವರು ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರೆ, ಸಹೋದರ ಶ್ರೀನಿವಾಸ ಭಟ್ ಅವರು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಅದೇ ದಿನ ರಾತ್ರಿ ನಿಧನರಾಗಿದ್ದಾರೆ. ಸುಬ್ರಹ್ಮಣ್ಯ ಭಟ್ ಅಸೌಖ್ಯಪೀಡಿತರಾಗಿ ಚಿಕಿತ್ಸೆ ಪಡೆದು ನಂತರ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ನ್ಯುಮೋನಿಯಾ ಬಾಧಿಸಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದ ಶ್ರೀನಿವಾಸ ಭಟ್ ಅವರನ್ನು ಅನಾರೋಗ್ಯ ಮರುಕಳಿಸಿದ ಹಿನ್ನೆಲೆಯಲ್ಲಿ ನಾಲ್ಕು ದಿವಸಗಳ ಹಿಂದೆ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸುಬ್ರಹ್ಮಣ್ಯ ಭಟ್ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರಾಗಿದ್ದು, ಬಿಜೆಪಿ ಬೆಳ್ಳೂರು ಪಂಚಾಯಿತಿ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಇವರು ಧಾರ್ಮಿಕ ಮುಖಂಡರಾಗಿ ಹೆಸರುಗಳಿಸಿದ್ದರು.

