ಕಾಸರಗೋಡು: ಭಾರತೀಯ ಸನಾತನ ಪರಂಪರೆಯಾದ ಗುರುಪೂಜೆಯನ್ನು ತಪ್ಪಾಗಿ ಚಿತ್ರಿಸುವ ಮೂಲಕ ಸಮಾಜದಲ್ಲಿ ಬಿರುಕು ಮೂಡಿಸಿ ರಾಜಕೀಯ ಲಾಭ ಪಡೆಯುವ ದುರುದ್ದೇಶಪೂರಿತ ಸಂಚು ಅಡಕವಾಗಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ.
ಬಂದಡ್ಕ ಸರಸ್ವತಿ ವಿದ್ಯಾಲಯ ಸಹಿತ ಕೇರಳದ ವಿದ್ಯಾನಿಕೇತನ ಶಾಲೆಗಳಲ್ಲಿ ಗುರು ಪೂರ್ಣಿಮೆಯ ದಿನ ನಡೆದ ಗುರುಪೂಜೆಯನ್ನು ಪ್ರಾಕೃತ ಎಂದು ಆರೋಪಿಸಿ ವಿವಾದ ಸೃಷ್ಠಿಸಿದ ಬೆಳವಣಿಗೆಯ ಹಿನ್ನೆಲೆಯಲ್ಲವರು ಈ ಹೇಳಿಕೆ ನೀಡಿದ್ದಾರೆ. ಗುರುಪೂಜೆ ಭಾರತೀಯ ಸನಾತನ ಪರಂಪರೆಯಿಂದಲೇ ನಡೆದುಬಂದ ಕ್ರಮವಾಗಿದೆ. ಅದು ಪೂಜನೀಯ ಗುರು ಹಿರಿಯರನ್ನು ಮತ್ತು ತಾಯ್ತಂದೆಯರನ್ನು ಗೌರವಿಸಲು, ಅವರಿಂದ ಆಶೀರ್ವಾದ ಪಡೆಯಲು ಕಲಿಸುವ ಸಂಸ್ಕøತಿಯಾಗಿದ್ದು, ಎಲ್ಲೂ ಒತ್ತಾಯ ಪೂರ್ವಕ ಗುರುಪೂಜೆ ನಡೆದಿಲ್ಲ.
ತಮ್ಮ ಮನೆಯ ಮಕ್ಕಳು ಸಂಸ್ಕಾರವಂತರಾಗಿ ಸನ್ನಡತೆಯ ಹಾದಿಯಲ್ಲಿ ಸಂಸ್ಕೃತಿ ಯ ಶಿಕ್ಷಣ ಪಡೆಯಬೇಕೆಂದು ಬಯಸಿ ಪೆÇೀಷಕರು ವಿದ್ಯಾನಿಕೇತನ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಹೊರತು, ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿರುವ ವ್ಯಕ್ತಿಯ ಕವಿತೆಗಳನ್ನು ಶಾಲಾ ಪಠ್ಯಗಳಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ಕಲಿಸಲಿಕ್ಕಾಗಿ ಸಿಪಿಎಂ ನಡೆಸುತ್ತಿರುವ ಡಿವೈಎಫ್‍ಐ ಸಂಸ್ಕಾರ ಪಡೆಯಲು ಅಲ್ಲ ಎಂದು ಎಂ. ಎಲ್. ಅಶ್ವಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುಪೂರ್ಣಿಮೆ ಅಂಗವಾಗಿ ಬಂದಡ್ಕದ ಕಕ್ಕೆಚ್ಚಾಲ್ ಸರಸ್ವತೀ ವಿದ್ಯಾಲಯದಲ್ಲಿ ಶಾಲಾ ವ್ಯಾಪ್ತಿಯ 30ರಷ್ಟು ನಿವೃತ್ತ ಶಿಕ್ಷಕರನ್ನು ಶಾಲೆ ವತಿಯಿಂದ ಗೌರವಿಸುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭ ವಿದ್ಯಾರ್ತಿಗಳನ್ನು ನೆಲದ ಮೇಲೆ ಕುಳ್ಳಿರಿಸಿ, ಕುರ್ಚಿಯಲ್ಲಿ ಕುಳಿತ ಹಿರಿಯ ಅಧ್ಯಾಪಕರ ಪಾದ ತೊಳೆದು ಹೂವು ಸಮರ್ಪಿಸುವ ಮೂಲಕ ಗುರುಪೂಜೆ ಆಯೋಜಿಸಿರುವುದಾಘಿ ಆರೋಪ ಕೇಳಿ ಬಂದಿತ್ತು.

