ಕುಂಬಳೆ : ಕುಂಬಳೆಯ ಜನಪ್ರಿಯ ಸಾಮಾಜಿಕ ಸಂಘವಾದ "ಚಿರಂಜೀವಿ" ನೇತೃತ್ವದಲ್ಲಿ ಜು. 6 ಭಾನುವಾರ(ನಾಳೆ) ನೇತ್ರ ತಪಾಸಣಾ ಶಿಬಿರ ಮತ್ತು ಡ್ರಗ್ಸ್, ಕ್ಯಾನ್ಸರ್ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ನಾಳೆ(ಭಾನುವಾರ) ಬೆಳಿಗ್ಗೆ 10ರಿಂದ ಕ್ಲಬ್ ಪರಿಸರದಲ್ಲಿ ನಡೆಯುವ ಉಚಿತ ಶಿಬಿರವನ್ನು ಪ್ರಸಾದ್ ನೇತ್ರಾಲಯದ ನುರಿತ ವೈದ್ಯರು ಮತ್ತು ತಜ್ಞ ಸಿಬಂದಿಗಳು ನಡೆಸಿಕೊಡುವರು.
ಇದೇ ಸಂದರ್ಭ ಕಾಸರಗೋಡು ಐಎಂಎ ನೇತೃತ್ವದಲ್ಲಿ ಡ್ರಗ್ಸ್ ವಿರುದ್ಧ ಜನಜಾಗೃತಿ ನಡೆಯಲಿದ್ದು, ಐಎಂಎ ಕಾಸರಗೋಡು
ಘಟಕ ಅಧ್ಯಕ್ಷ ಡಾ. ಹರಿಕಿರಣ್ ಬಂಗೇರ ವಿಶೇಷ ಉಪನ್ಯಾಸ ನೀಡುವರು. ಮಂಗಳೂರಿನ ಎಂ. ಐ. ಒ ಆಸ್ಪತ್ರೆ ಯ ತಜ್ಞ
ವೈದ್ಯರು ಕ್ಯಾನ್ಸರ್ ಕುರಿತಾದ ಜನಜಾಗೃತಿ ಉಪನ್ಯಾಸ ನೀಡುವರು.
ನೇತ್ರ ರೋಗ ಸಹಿತ ಸಮಾಜದಲ್ಲಿ ಕ್ಯಾನ್ಸರ್ ಮತ್ತು ಡ್ರಗ್ಸ್ ಪಿಡುಗು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಯಿಂದ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದು ಚಿರಂಜೀವಿ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮವನ್ನು ಕುಂಬಳೆ ಗ್ರಾ. ಪಂ. ಅಧ್ಯಕ್ಷೆ ಯು. ಪಿ. ತಾಹಿರಾ ಉದ್ಘಾಟಿಸುವರು. ಕ್ಲಬ್ ಅಧ್ಯಕ್ಷ ಕೃಷ್ಣ ಗಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸುವರು.
ವಾರ್ಡು ಸದಸ್ಯೆ ಪ್ರೇಮಾವತಿ ಶೆಟ್ಟಿ, ಕುಂಬಳೆ ಎಸ್. ಐ. ಶ್ರೀಜೇಶ್, ಕುಂಬಳೆ ಜಿ. ಎಸ್. ಬಿ. ಎಸ್ ಮುಖ್ಯೋಪಾಧ್ಯಾಯ ವಿಜಯ ಕುಮಾರ್ ಪಾವಳ, ಮಂಗಳೂರು ಏನಪೆÇೀಯ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಕುಂಬಳೆ ವ್ಯಾಪಾರಿ ವ್ಯವಸಾಯಿ ಸಮನ್ವಯ ಸಮಿತಿ ಅಧ್ಯಕ್ಷ ರಾಜೇಶ್ ಮನಯತ್ತ್, ಪ್ರಸಾದ್ ನೇತ್ರಾಲಯದ ಡಾ. ವೃಂದಾ ವಿಶ್ವನಾಥ್, ಕುಂಬಳೆ ಸಹಕಾರಿ ಆಸ್ಪತ್ರೆಯ ಅಧ್ಯಕ್ಷ ರಘುದೇವನ್ ಮಾಸ್ತರ್, ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಶುಭಾಶಂಸನೆ ಮಾಡುವರು. ಪ್ರಸಾದ್ ಪೆರುವಾಡು ಸ್ವಾಗತಿಸಿ ಗೋಪಿ ಎಂ. ಲವ್ಲೀ ವಂದಿಸುವರು.


