ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ ಎರಡನೇ ದಿನ ಶುಕ್ರವಾರ ಸಾಂಸ್ಕøತಿಕ ವೇದಿಕೆಯಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ ಉಜಿರೆ ಇವರಿಂದ ಯಕ್ಷಗಾನ ತಾಳಮದ್ದಳೆ ಕೃಷ್ಣಸಾರಥ್ಯ ಸ್ವೀಕಾರ ನಡೆಯಿತು. ಪ್ರತಿಷ್ಠಾನದ ಉಜಿರೆ ಅಶೋಕ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಉತ್ತರ ಕೇರಳದ ಅದ್ವೈತ ಭಾಗವತ ಸಂಪ್ರದಾಯದ ಎಡನೀರು ಮಠದ ಅನೇಕ ಯತಿವರ್ಯರು ಕಲೆ ಸಂಸ್ಕøತಿಗೆ ಪೋಷಣೆ ಮತ್ತು ಆಶ್ರಯವನ್ನು ನೀಡಿದ್ದಾರೆ. ಧಾರ್ಮಿಕವಾಗಿ, ವೈದಿಕವಾಗಿ, ಸಂಸ್ಕøತಿ, ಕಲೆ ಕಾನೂನಿನವರೆಗೆ ಕೈಚಾಚಿ ಬ್ರಹ್ಮೈಕ್ಯ ಗುರುಗಳು ಭಾರತದಾದ್ಯಂತ ಸತ್ ಕ್ರಾಂತಿಯನ್ನು ಮಾಡಿದ್ದಾರೆ. ಎಡನೀರು ಮಠವು ಶತಮಾನದಿಂದ ಕಲೆಯ ಆವರಣ, ಕಲೆಯ ಗೌರವವನ್ನು, ಕಲಾವಿದರನ್ನು ಪ್ರೀತಿಸಿದ್ದಾರೆ. ಪ್ರಸ್ತುತ ಸಚ್ಚಿದಾನಂದ ಭಾರತೀ ಶ್ರೀಗಳು ಕಲೆಯ ಪೋಷಣೆಯನ್ನು ಅತ್ಯುತ್ಕøಷ್ಟವಾಗಿ ಮುಂದುವರಿಸುತ್ತಿದ್ದಾರೆ. ಅಭ್ಯಾಸಿಗಳಿಗೆ, ವಿದ್ವತ್ ಆದವರಿಗೆ, ಸಂಗೀತಗಾರರಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ಶ್ರೀಮಠದ ಚಾತುರ್ಮಾಸ್ಯ ವ್ರತಾಚರಣೆಯ ವೇದಿಕೆಯು ರಾಷ್ಟ್ರೀಯ ವೇದಿಕೆಯಾಗಿ ಬದಲಾಗಿದೆ. ಕಲೆಯ ಸಂರಕ್ಷಣೆಯಲ್ಲಿ ಶ್ರೀಮಠವು ಮುಂದುವರಿಯುತ್ತಿರುವುದು ನಮಗೆಲ್ಲ ಹೆಮ್ಮೆ ಎಂದ ಅವರು ಸಾಮಾಜಿಕ ಜಾಲತಾಣಗಳು ಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರನ್ನು ಸಮಾನದೃಷ್ಟಿಯಿಂದ ಕಾಣಬೇಕು. ತಮ್ಮ ಆವರಣದಲ್ಲಿ ಗೌರವವನ್ನು ಕಾಯ್ದುಕೊಳ್ಳಬೇಕು ಎಂದರು.
ಬಳಿಕ ನಡೆದ ತಾಳಮದ್ದಳೆಯಲ್ಲಿ ಕೌರವನಾಗಿ ಉಜಿರೆ ಅಶೋಕ್ ಭಟ್, ಅರ್ಜುನನಾಗಿ ಕೇಕಣಾಜೆ ಕೇಶವ ಭಟ್, ಕೃಷ್ಣನ ಪಾತ್ರದಲ್ಲಿ ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್, ಬಲರಾಮನಾಗಿ ಶೇಣಿ ವೇಣುಗೋಪಾಲ ಭಟ್ ತಮ್ಮ ಪಾತ್ರಗಳಲ್ಲಿ ಮಿಂಚಿದರು. ಹಿಮ್ಮೇಳದಲ್ಲಿ ಕಾವ್ಯಶ್ರೀ ನಾಯಕ್ ಅಜೇರು, ಅಡೂರು ಲಕ್ಷ್ಮೀನಾರಾಯಣ ರಾವ್, ಲವಕುಮಾರ ಐಲ ಜೊತೆಗೂಡಿದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಕಲಾವಿದರಿಗೆ ಮಂತ್ರಾಕ್ಷತೆಯನ್ನುತ್ತು ಹರಸಿದರು.

.jpg)
