ಕಾಸರಗೋಡು: ಪ್ಲಸ್‍ಟು 'ಸೇ'ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಮನೋವ್ಯಥೆಯಲ್ಲಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ವೆಳ್ಳರಿಕುಂಡ್‍ನಲ್ಲಿ ನಡೆದಿದೆ. ವೆಳ್ಳರಿಕುಂಡು ಸೈಂಟ್ ಜೂಡ್ಸ್ ಹೈಯರ್‍ಸೆಕೆಂಡರಿ ಶಾಲಾ ಪ್ಲಸ್‍ಟು ವಿದ್ಯಾರ್ಥಿ, ಚೆಂಬನ್‍ಕುನ್ನು ಕಿಳಕ್ಕೇಕುಟ್ಟ್ ನಿವಾಸಿ ಬಿನುಥಾಮಸ್-ಶಿಲ್ಪಾ ದಂಪತಿ ಪುತ್ರ ಕ್ರಿಸ್ಟೋ ಥಾಮಸ್(18)ಮೃತಪಟ್ಟ ವಿದ್ಯಾರ್ಥಿ.
ಕ್ರಿಸ್ಟೋ ಥಾಮಸ್‍ನನ್ನು ತನ್ನ ಮನೆ ಸನಿಹದ ಜನವಾಸವಿಲ್ಲದ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ತಕ್ಷಣ ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ಪ್ಲಸ್‍ಟು ಪರೀಕ್ಷೆ ಬರೆದಿದ್ದ ಈತ ಅನುತ್ತೀರ್ಣನಾಗಿದ್ದ ಹಿನ್ನೆಲೆಯಲ್ಲಿ 'ಸೇ'ಪರೀಕ್ಷೆ ಬರೆದಿದ್ದನು.

