ಕಾಸರಗೋಡು: ಭಾರತೀಯ ಮಸ್ದೂರ್ ಸಂಘದ 70ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಧ್ವಜಾರೋಹಣ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಟಯಾಕ್ಸಿ ಚಾಲಕರ ಸಂಘದ ವತಿಯಿಂದ ಧ್ವಜಾರೋಹಣ ನಡೆಯಿತು. ಬದಿಯಡ್ಕ ಕ್ಯಾಂಪೆÇ್ಕೀ ವಲಯ ಕಚೇರಿಯಲ್ಲಿ ನಡೆದ ಸಮಾರಂಬದಲ್ಲಿ ವಲಯ ಪ್ರಬಂಧಕ ಚಂದ್ರ ಬಿ.ಎಂ ಅವರು ಧ್ವಜಾರೋಹಣ ನಡೆಸಿದರು. ಕ್ಯಾಂಪ್ಕೋ ಸಿಬ್ಬಂದಿ ಮತ್ತು ಇತರರು ಭಾಗವಹಿಸಿದರು.
ಬಿಎಂಎಸ್ ಕಾಸರಗೋಡು ಜಿಲ್ಲಾ ಸ,ಇತಿ ಕಚೇರಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಪಿ. ಮುರಳೀಧರನ್ ಧ್ವಜಾರೋಹಣ ನಡೆಸಿದರು. ನಾಯ್ಕಾಪು ಆಟೋ ರಿಕ್ಷಾ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಮುಖಂಡ ಮುರಳೀಧರ ಯಾದವ್ ಧ್ವಜಾರೋಹಣ ನಡೆಸಿದರು. ಮುಳ್ಳೇರಿಯ, ಕುಂಬಳೆ, ಮಾಯಿಪ್ಪಾಡಿ, ಪೆರ್ಲ, ಸೀತಾಂಗೋಳಿ ಸೇರಿದಂತೆ ನಾನಾ ಕಡೆ ಬಿಎಂಎಸ್ ಸ್ಥಾಪನಾ ದಿನಾಚರಣೆ ಅಂಗವಾಘಿ ಧ್ವಜಾರೋಹಣ ನಡೆಯಿತು.
ಚಿತ್ರ ಮಾಹಿತಿ: ನಾಯ್ಕಾಪು ಆಟೋರಿಕ್ಷಾ ನಿಲ್ದಾಣದಲ್ಲಿ ಬಿಎಂಎಸ್ ಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮುರಳೀಧರ ಯಾದವ್ ಧ್ವಜಾರೋಹಣ ನಡೆಸಿದರು.


