ಗೂಗಲ್ ಕ್ರೂಮ್ ಮೂಲರ ಬಹುತೇಕರು ಸರ್ಚ್ ಎಂಜಿನ್ ಬಳಸುತ್ತಾರೆ. ಪ್ರಮುಖವಾಗಿ ಏನೇ ಮಾಹಿತಿ ಬೇಕಿದ್ದರೂ, ಫೋಟೋ, ವೆಬ್‌ಸೈಟ್ ಏನೇ ಇದ್ದರೂ ಗೂಗಲ್ ಸರ್ಚ್ ಮೂಲಕ ಪಡೆಯುತ್ತೇವೆ. ಇದೀಗ ಗೂಗಲ್ ಸರ್ಚ್ ಅಷ್ಟಕ್ಕೆ ಸೀಮಿತವಾಗಿಲ್ಲ. ಬಳಕೆದಾರರಿಗೆ ಮತ್ತಷ್ಟು ನೆರವು ನೀಡುವಲ್ಲಿ ಗೂಗಲ್ ಎಐ ಮೊಡ್ ಸರ್ಚ್ ಆರಂಭಿಸಿದೆ.
ತಂತ್ರಜ್ಞಾನದಲ್ಲಿ ಭಾರತದ ಹೊಸ ಹೊಸ ಆವಿಷ್ಕಾರಗಳನ್ನು, ಹೊಸ ತಂತ್ರಜ್ಞಾನಗಳನ್ನು ಬೇಗನೆ ಅಪ್ಪಿಕೊಂಡು ಮುಂದೆ ಸಾಗುತ್ತಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೀಗ ಭಾರತದ ಬಹುತೇಕ ಕ್ಷೇತ್ರಗಳನ್ನು ಆವರಿಸಿಕೊಂಡಿದೆ. ಮತ್ತೊಂದು ವಿಶೇಷ ಅಂದರೆ ಇದೀಗ ಗೂಗಲ್ ಭಾರತದಲ್ಲಿ ಎಐ ಮೊಡ್ ಸರ್ಚ್ ಆರಂಭಿಸಿದೆ. ಇಷ್ಟು ದಿನ ಗೂಗಲ್ ಸರ್ಚ್ ಮಾಡುತ್ತಿದ್ದ ಗ್ರಾಹಕರಿಗೆ ಇದೀಗ ಎಐ ನೆರವು ನೀಡಲಿದೆ. ಇದರಿಂದ ಸಿಂಪಲ್ ಗೂಗಲ್ ಸರ್ಚ್ ಇದೀಗ ಮತ್ತಷ್ಟು ಸುಲಭ ಮಾತ್ರವಲ್ಲ, ಮಾಹಿತಿಗಳ ಆಗರವನ್ನೇ ನೀಡಲಿದೆ.

ಗೂಗಲ್ ಎಐ ಮೊಡ್ ಸರ್ಜ್ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಸಂತಸ ಹಂಚಿಕೊಂಡಿದ್ದಾರೆ. ಅದ್ಭುತ ಪ್ರತಿಕ್ರಿಯೆ ಹಾಗೂ ಸ್ಪಂದನೆ ಬಳಿಕ ಭಾರತದಲ್ಲಿ ನಾವು ಎಐ ಮೊಡ್ ಆಫ್ ಸರ್ಚ್ (ಇಂಗ್ಲೀಷ್) ಆರಂಭಿಸುತ್ತಿದ್ದೇವೆ. ಇದು ಸಂಪೂರ್ಣವಾಗಿ ಸರ್ಚ್ ಎಂಜಿನ್ ಮರುಕಲ್ಪನೆಯ ಭಾಗವಾಗಿದೆ. ಇದೀಗ ಹೆಚ್ಚಿನ ಬಳೆಕೆದಾರರು ಈ ಎಐ ಮೊಡ್ ಸರ್ಚ್ ಬಳಕೆ ಮಾಡುವನ್ನು ನೋಡಲು ಎದುರುನೋಡುತ್ತಿದ್ದೇವೆ ಎಂದು ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.
ಗೂಗಲ್ ಎಐ ಮೊಡ್ ಸರ್ಚ್ ಕುರಿತು ಗೂಗಲ್ ಸರ್ಚ್ ಎಂಜಿನ್ ಪ್ರಾಡಕ್ಟ್ ಮ್ಯಾನೇಜ್ಮೆಂಟ್‌ನ ಭಾರತದ ಉಪಾಧ್ಯಕ್ಷ ಹೆಮಾ ಬುದರಾಜ್ ಈ ಕುರಿತು ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದಾರೆ. ಭಾರತದಲ್ಲಿ ಗೂಗಲ್ ಎಐ ಮೊಡ್ ಸರ್ಚ್ ಆರಂಭಗೊಂಡಿದೆ. ಇದೀಗ ಬಳಕೆದಾರರು ಈ ಹಿಂದಿಗಿಂತ ನಿಖರ ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಗೂಗಲ್‌ನಲ್ಲಿ ಇದೀಗ ಸರ್ಚ್ ಮಾಡಿದಾಗ ಬಳಕೆದಾರರಿಗೆ ಎಐ ನೆರವು ನೀಡುತ್ತದೆ. ಇದರಿಂದ ಈ ಹಿಂದಿಗಿಂತಲು ಸುಲಭವಾಗಿ ಬಳಕೆದಾರರು ಮಾಹಿತಿಗಳನ್ನು ಪಡೆಯಬಹುದು.

ಭಾರತದಲ್ಲಿ ಜೂನ್ ತಿಂಗಳ ಆರಂಭದಲ್ಲಿ ಗೂಗಲ್ ಎಐ ಮೊಡ್ ಸರ್ಚ್ ಲ್ಯಾಬ್‌ಗಳಲ್ಲಿ ಪರಿಚಯ ಮಾಡಲಾಗಿತ್ತು. ಇದಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಾಯೋಗಿಕವಾಗಿ ಪರಿಚಯಿಸಿದ ಗಗೂಲ್ ಎಐ ಮೊಡ್ ಸರ್ಜ್ ಸಿಕ್ಕ ಪ್ರತಿಕ್ರಿಯೆ ಹಾಗೂ ಸಲಹೆ ಬಳಿಕ ಕೆಲ ಸಣ್ಣ ಬದಲಾವಣೆಗಳೊಂದಿಗೆ ಇದೀಗ ಭಾರತದಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಎಐ ಮೊಡ್ ಸರ್ಚ್ ಆರಂಭಿಸಿದ್ದೇವೆ ಎಂದು ಹೇಮಾ ಬುದರಾಜು ಹೇಳಿದ್ದಾರೆ.

ಆರಂಭಿಕ ಪ್ರತಿಕ್ರಿಯೆ ಸಂತಸ ತಂದಿದೆ. ಬಳಕೆದಾರರು ಎಐ ಮೊಡ್ ಸರ್ಚ್ ವೇಗ, ನಿಖರತೆ, ಹೆಚ್ಚಿನ ಮಾಹಿತಿ ಸಂಗ್ರಹ, ನಮ್ಮ ಉದ್ದೇಶಿತ ಟಾಪಿಕ್ ಕುರಿತು ಸಂಪೂರ್ಣ ಮಾಹಿತಿಗಳು ಲಭ್ಯವಾಗುತ್ತಿದೆ. ಇದರಿಂದ ಹೆಚ್ಚು ಸಮಯ ಸರ್ಚ್ ಮಾಡುತ್ತಾ ಕಾಲ ಕಳೆಯಬೇಕಿಲ್ಲ. ನಿರ್ದಿಷ್ಟ ಟಾಪಿಕ್ ಕುರಿತು ಕೆಲವೇ ಕ್ಷಣಗಳಲ್ಲಿ ಮಾಹಿತಿ ಸಿಗುತ್ತಿದೆ ಅನ್ನೋ ಅಭಿಪ್ರಾಯವನ್ನು ಬಳಕೆದಾರರು ವ್ಯಕ್ತಪಡಿಸಿದ್ದಾರೆ ಎಂದು ಹೇಮಾ ಬುದರಾಜು ಹೇಳಿದ್ದಾರೆ.

ಗೂಗಲ್ ಎಐ ಮೊಡ್ ಸರ್ಚ್‌ನಲ್ಲಿ ಟೈಪ್ ಮಾಡಿ ಮಾಹಿತಿ ಪಡೆಯಬಹುದು, ವಾಯ್ಸ್ ಕಮಾಂಡ್ ಮೂಲಕ, ಗೂಗಲ್ ಲೆನ್ಸ್ ಮೂಲಕ ಸ್ನಾಪ್ ಫೋಟೋ ಸೇರಿದಂತೆ ಹಲವು ಆಯ್ಕೆಗಳ ಮೂಲಕ ನಿರ್ದಿಷ್ಠ ಮಾಹಿತಿ ಪಡೆಯಲು ಸಾಧ್ಯವಿದೆ. ಸುಲಭವಾಗಿ ಸರ್ಚ್ ಮಾಡಲು ಇದೀಗ ಸಾಧ್ಯವಿದೆ. ಗೂಗಲ್ ಎಐ ಹೊಸ ತಂತ್ರಜ್ಞಾನ ಭಾರತದಲ್ಲಿ ಕ್ರಾಂತಿ ಮಾಡುವುದರಲ್ಲಿ ಅನುಮಾನವಿಲ್ಲ.

