ಕಾಸರಗೋಡು: ಕಾಞಂಗಾಡ್ ಸೌತ್ ಪ್ರದೇಶದಲ್ಲಿ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಲಾರಿ ಮಗುಚಿಬಿದ್ದ ಪರಿಣಾಮ ಈ ಪ್ರದೇಶದಲ್ಲಿ ಅತೀವ ಜಾಗ್ರತೆ ಪಾಲಿಸಲಾಗುತ್ತಿದೆ. ಹಿನ್ನೆಲೆಯಲ್ಲಿ, ಜುಲೈ 25 ರಂದು ಕೊವ್ವಲ್‍ನಿಂದ(ಕಾಞಂಗಾಡ್ ದಕ್ಷಿಣದಿಂದ ಐಂಙÉೂೀತ್ ವರೆಗೆ) ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ 18, 19ಹಾಗೂ 26ನೇ ವಾರ್ಡು ವ್ಯಾಪ್ತಿಯಲ್ಲಿ ಕಫ್ರ್ಯೂ ವಿಧಿಸಲಾಗಿದ್ದು, ಶಾಲೆಗಳು ಮತ್ತು ಅಂಗನವಾಡಿಗಳಿಗೆ ಸ್ಥಳೀಯ ರಜೆ ಘೋಷಿಸಲಾಗಿದೆ. ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ರಜೆ ಅನ್ವಯವಾಗಲಿದೆ. ಜು. 25ರ ಬೆಳಿಗ್ಗೆ8ರಿಂದ ದಕ್ಷಿಣಕ್ಕೆ ಹೋಗುವ ಹೆದ್ದಾರಿಯಲ್ಲಿ ಪಡನ್ನಕ್ಕಾಡ್ ವರೆಗಿನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಘಿದ್ದು, ವಾಹನಗಳನ್ನು ಬೇರೆ ಹಾದಿಯಾಗಿ ಕಳುಹಿಸಲಾಘುವುದು. ಈ ಪ್ರದೇಶದ ಮನೆಯಲ್ಲಿ ಗ್ಯಾಸ್ ಸಿಲಿಂಡರ್, ಹೊಗೆ ಅಥವಾ ಇನ್ವರ್ಟರ್ ಚಾಲಿತ ವಿದ್ಯುತ್ ಅಥವಾ ಇತರ ಸಾಧನಗಳನ್ನು ಬಳಸದಿರುವಂತೆ ಸೂಚಿಸಲಾಗಿದ್ದು, ವಿಡಿಯೋ ಚಿತ್ರೀಕರಣ ಮತ್ತು ಘಟನಾ ಸ್ಥಳಕ್ಕೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಟ್ಯಾಂಕರ್ ಲಾರಿಯನ್ನು ಸುರಕ್ಷಿತವಾಗಿ ಮೇಲೆತ್ತುವವರೆಗೆ ವಿದ್ಯುತ್ ಸಂಪರ್ಕಗಳನ್ನು ವಿಚ್ಛೇದಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
ಅನಿಲಸಾಗಾಟದ ಟ್ಯಾಂಕರ್ ಗುರುವಾರ ಸಂಜೆ ಪಲ್ಟಿಯಾಗಿದ್ದು, ಅನಿಲ ಸೋರಿಕೆ ಕಂಡುಬಂದಿಲ್ಲ.


