ಪೆರ್ಲ: ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ಅಮ್ಮ ಓದು' ಪುಸ್ತಕ ವಿತರಣೆ ಉದ್ಘಾಟನೆ ನೆರವೇರಿತು. ಪಡ್ರೆ ವಾಣಿನಗರ ಸರ್ಕಾರಿ ಪ್ರೌಢಶಾಲಾ ಕನ್ನಡ ಮಾಧ್ಯಮ ಶಿಕ್ಷಕಿ ಸರಸ್ವತಿ ಕೆ.ಎನ್ ಉದ್ಘಾಟಿಸಿ ಮಾತನಾಡಿ, ಮಕ್ಕಳ ಓದುವಿಕೆಯಲ್ಲಿ ಅಮ್ಮನ ಪಾತ್ರ ಮಹತ್ವದ್ದಾಗಿದೆ. ಓದುವಿಕೆಯನ್ನು ದೈನಂದಿನ ಚಟುವಟಿಕೆಯನ್ನಾಗಿಸಲು ಹಾಗೂ ಓದಿವಿಕೆ ಕಡೆ ಮಕ್ಕಳ ಮನಸ್ಸು ಸಿದ್ಧಗೊಳಿಸುವಲ್ಲಿ ಅಮ್ಮಂದಿರ ಪಾತ್ರವೂ ಅಡಕವಾಗಿರುತ್ತದೆ. ನಿರಂತರ ಓದುವಿಕೆಯಿಂದ ನೈತಿಕ ಮೌಲ್ಯ ಬೆಳೆಯಲು ಕಾರಣವಾಗುವುದಾಗಿ ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಬಿ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಶಶಿಧರ್ ಅತಿಥಿಯಾಗಿ ಭಾಗವಹಿಸಿದ್ದರು. ಎಸ್ಎಸ್ಜಿ ಅಧ್ಯಕ್ಷ ಬಟ್ಯ ಮಾಸ್ಟರ್, .ಎಸ್ಎಸ್ಜಿ ಉಪಾಧ್ಯಕ್ಷ ಮಾಲಿಂಗ ಕೆ, ಎಸ್ಎಂಸಿ ಅಧ್ಯಕ್ಷ ಬಾಲಕೃಷ್ಣ ಭಟ್, ಎಂಪಿಟಿಎ ಅಧ್ಯಕ್ಷ ಮಾಲತಿ ಸಿ ಆರ್ ಸಿ, ಕೋರ್ಡಿನೆಟರ್ ಸುರೇಶ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಜಕೂಡ್ಲು ಸ್ವಾಗತಿಸಿದರು. ಶಾಲಾ ಶಿಕ್ಷಕಿ ಸಹನಾ ಕೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಮಹಮ್ಮದ್ ಪೈಸೆಲ್ ವಂದಿಸಿದರು.


