ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಶಿಲಾಮಯ ಗರ್ಭಗುಡಿ ನಿರ್ಮಾಣದ ಸಿದ್ಧತೆ ಭರದಿಂದ ಸಾಗುತ್ತಿದ್ದು, ಗರ್ಭಗೃಹದ ದಾರಂದ ಮುಹೂರ್ತ ನೆರವೇರಿಸಲಾಯಿತು. ಶಿಲ್ಪಿ ಬೆದ್ರಡ್ಕ ರಮೇಶ ಕಾರಂತ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಾಂಪ್ರದಾಯಿಕ ಚಟುವಟಿಕೆಗಳ ನಂತರ ಶಿಲಾಮಯ ಗರ್ಭಗುಡಿಯ ನಿರ್ಮಾಣ ಹೊಣೆ ಹೊತ್ತಿರುವ ಮುರುಡೇಶ್ವರದ ಅಣ್ಣಪ್ಪ ಜಿ ಅವರು ಕಾರ್ಮಿಕತ್ವ ವಹಿಸಿದರು.
ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಡಾ.ಅನಂತ ಕಾಮತ್ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರಾದ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಧಾನ ಕಾರ್ಯದರ್ಶಿ ಹರೀಶ್ ಕೊಳ್ಕೆಬೈಲು, ಕೋಶಾಧಿಕಾರಿ ಶಾಂತಕುಮಾರ್ ಮುಂಡಿತ್ತಡ್ಕ, ಆಡಳಿತ ಮೊಕ್ತೇಸರ ಅಚ್ಯುತ ಕೆ., ಧರ್ಮದರ್ಶಿ ನಾರಾಯಣ ಪೂಜಾರಿ, ರಘು ಮೀಪುಗುರಿ, ಲವ ಮೀಪುಗುರಿ, ಬಾಬು ಪೂಜಾರಿ, ರಂಜಿತ್ ಮನ್ನಿಪ್ಪಾಡಿ, ದುಗ್ಗಪ್ಪ ಕಾಳ್ಯಂಗಾಡು, ಆನಂದ ಮೀಪುಗುರಿ, ದಯಾನಂದ ಕಾಳ್ಯಂಗಾಡು, ಗೋವಿಂದ, ಪ್ರಶಾಂತ,ಅಜೇಯ, ಶಂಕರ, ಗಣೇಶ, ರಾಜೇಶ್, ಸಚಿನ್, ರಮೇಶ್ ಮಾತೃಸಮಿತಿ ಪದಾಧಿಕಾರಿಗಳಾದ ದೀಪಾ ಕೆ, ಶೋಭಾ, ಹರ್ಷಿತ, ಅಕ್ಷತ, ಚಂದ್ರಾವತಿ, ಭವಾನಿ, ರಮಣಿ, ಶಶಿಕಲ, ಮಮತಾ ಮೊದಲಾದವರು ಉಪಸ್ಥಿತರಿದ್ದರು.
ಪೂರ್ಣಶಿಲಾಮಯ ಗರ್ಭಗುಡಿಯ ನಿರ್ಮಾಣಕಾರ್ಯವನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.


