ಕಾಸರಗೋಡು: 'ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ'ಕಾರ್ಯಕ್ರಮ ಬೆಂಗಳೂರು ವೈಟ್‍ಫೀಲ್ಡ್‍ನ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್‍ನಲ್ಲಿ ಜರುಗಿತು. 'ತೊದಲ್ನುಡಿ' ಮಕ್ಕಳ ಸಾಹಿತ್ಯ ಮಾಸಪತ್ರಿಕೆ, ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ-ಗ್ರಂಥಾಲಯ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.
ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕರಾದ ಡಾ. ವಾಮನ್‍ರಾವ್-ಸಂಧ್ಯಾರಾಣಿ ದಂಪತಿ ಸಮಾರಂಭ ಉದ್ಘಾಟಿಸಿದರು. ಡಾ. ಸುಷ್ಮಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಆರ್ಟ್ ಆಫ್ ಲಿವಿಂಗ್‍ನ ಆಚಾರ್ಯ ಆರ್. ಶ್ರೀನಿವಾಸ್, ಸರಸ್ವತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀ ಬಿ. ಶಂಕರ್, ಬೆಂಗಳೂರು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾ.ಮಾ. ಸತೀಶ್, ಪೆÇ್ರ. ಕೆ.ಇ. ರಾಧಾಕೃಷ್ಣ, ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ ಬಾಡೂರು, ಪೆÇ್ರ. ಮಲರ್ವಿಳಿ ಉಪಸ್ಥಿತರಿದ್ದರು. ಈ ಸಂದರ್ಭ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಚುಟುಕು ಕವಿ-ಕಾವ್ಯ ಸಂಗಮ ನಡೆಯಿತು.
ಡಾ. ಸುಷ್ಮಾ ಶಂಕರ್ ಹಾಗೂ ಪ್ರಕಾಶ್ ಮತ್ತಿಹಳ್ಳಿ ಅವರಿಗೆ ನಾಡೋಜ ಡಾ. ಕಯ್ಯಾರ ಪ್ರಶಸ್ತಿ, ಪೆÇ್ರ. ಕೆ.ಇ. ರಾಧಾಕೃಷ್ಣ, ಸುಬ್ರಹ್ಮಣ್ಯ ಬಾಡೂರು, ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ ರಾಷ್ಟ್ರಕವಿ ಗೋವಿಂದಪೈ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಾ ಮಾ ಸತೀಶ್, ಡಾ. ಮಲರ್ವಿಳಿ, ಡಾ. ರವಿಶಂಕರ್, ಮತ್ತು ಮೇರಿ ಜೋಸೆಫ್ ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭ ಕಳೆದ ಮೂರು ದಶಕಗಳಿಂದ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾ. ವಾಮನ್‍ರಾವ್-ಸಂಧ್ಯಾ ರಾಣಿ ದಂಪತಿಯನ್ನು ತೊದಲ್ನುಡಿ ಮಾಸಪತ್ರಿಕೆ ಹಾಗೂ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟಿನ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಕಾವ್ಯ ಸಂಗಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಹಿರಿಯರಿಗೆ ಪ್ರಮಾಣಪತ್ರ ಹಾಗೂ ಪಾರಿತೋಷಿಕ ನೀಡಿ ಗೌರವಿಸಲಾಯಿತು. ಪೆÇ್ರ. ರಾಕೇಶ್ ಸ್ವಾಗತಿಸಿದರು. ರೆಬಿನ್ ರವೀಂದ್ರನ್ ವಂದಿಸಿದರು.


