ಬದಿಯಡ್ಕ: ಬಿಎಂಎಸ್ 70 ನೇ ಸ್ಥಾಪನಾ ದಿನದ ಅಂಗವಾಗಿ ನಾರಂಪಾಡಿ ಘಟಕದ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಹಿರಿಯ ಕಾರ್ಯಕರ್ತ ಮಹಾಲಿಂಗ ಪಾಟಾಳಿ ಧ್ವಜಾರೋಹಣ ನೆರವೇರಿಸಿದರು. ಬಿಎಂಎಸ್ ಮುಳ್ಳೇರಿಯ ವಲಯ ಕಾರ್ಯದರ್ಶಿ ಸದಾಶಿವ ಮಾತನಾಡಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಹರೀಶ್ ನಾರಂಪಾಡಿ ಉಪಸ್ಥಿತರಿದ್ದರು. ಪ್ರಮುಖರಾದ ರವೀಂದ್ರ ಪಾವೂರು, ಗಿರೀಶ್ ಮುಂಡೊಲುಮೂಲೆ, ಸುರೇಶ್ ಮುಂಡೋಲುಮೂಲೆ, ಸತ್ಯನಾರಾಯಣ ಭಟ್, ಉದಯ ನೆಲ್ಯಡ್ಕ, ಗಿರೀಶ್ ರೈ ನಾರಂಪಾಡಿ ನೇತೃತ್ವ ನೀಡಿದರು.


