ಉಪ್ಪಳ : ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪಿ.ಟಿ.ಎ ಮಹಾಸಭೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿ.ಆರ್.ಸಿ ತರಬೇತುದಾರೆ ಸುಮಯ್ಯ ಟೀಚರ್ ಉಪಸ್ಥಿತರಿದ್ದರು.
ಈ ಸಂದರ್ಭ ಪಿ.ಟಿ.ಎ ನೂತನ ಕಾರ್ಯಕಾರಿ ಸಮಿತಿಯನ್ನು ರೂಪಿಕರಿಸಲಾಯಿತು. ನೂತನ ಪಿ.ಟಿ.ಎ ಅಧ್ಯಕ್ಷರಾಗಿ ಇಬ್ರಾಹಿಂ ಹನೀಫಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಇಂತಿಯಾಸ್, ಎಂ.ಪಿ.ಟಿ.ಎ ಅಧ್ಯಕ್ಷರಾಗಿ ಸುಷ್ಮಾ ಹಾಗೂ ಉಪಾಧ್ಯಕ್ಷೆಯಾಗಿ ಪಾತಿಮತ್ ಸಾಹಿದಾ ಅವರನ್ನು ಆಯ್ಕೆ ಮಾಡಿ ಶಾಲಾವತಿಯಿಂದ ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು. ಸಭೆಯ ಪ್ರಮುಖ ಭಾಗವಾಗಿ 2025-26 ನೇ ಶೈಕ್ಷಣಿಕ ವರ್ಷದ ಅಕಾಡೆಮಿಕ್ ಮಾಸ್ಟರ್ ಪ್ಲಾನ್ ನ್ನು ಮುಖ್ಯೋಪಾಧ್ಯಾಯನಿ ಚಿತ್ರಾವತಿ ಚಿಗುರುಪಾದೆ ಅವರು ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚಿತ್ರ ಓದು, ಚಿತ್ರರಚನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಶಿಕ್ಷಕ ರಿಯಾಸ್ ಪೆರಿಂಗಡಿ ಸ್ವಾಗತಿಸಿ, ಶಿಕ್ಷಕಿ ಜಸೀಲಾ ವಂದಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಕಾರ್ಯಕ್ರಮ ನಿರೂಪಿಸಿದರು.

.jpg)
