ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಪ್ರಬಂಧಕ ಡಾ.ಜಯಪ್ರಕಾಶ ನಾರಾಯಣ ಟಿ.ಕೆ ನೆರವೇರಿಸಿದರು. ಪ್ರತಿಭೆಗೊಂದು ಪುರಸ್ಕಾರದ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಬಹುಮಾನಗಳನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವಸಂತ ಭಟ್ ತೊಟ್ಟೆತ್ತೋಡಿ ವಿತರಿಸಿದರು. ರಾಜೇಶ್ ಪೂಜಾರಿ ದೇರಂಬಳ, ಪಿ.ಟಿ.ಎ ಅಧ್ಯಕ್ಷ ಗಣೇಶ ಜಪ್ಪ ಮಾತೃ ಮಂಡಳಿ ಅಧ್ಯಕ್ಷೆ ಹೇಮಾವತಿ, ಪ್ರಿ-ಪ್ರೈಮರಿ ಪಿ.ಟಿ.ಎ ಅಧ್ಯಕ್ಷ ಜಯಪ್ರಕಾಶ್ ಕುಳೂರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಟೀಚರ್ ಸ್ವಾಗತಿಸಿ, ದೀಕ್ಷಾ ಕೆ. ವಂದಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕುಮಾರ್ ಟಿ.ಆರ್ ಶುಭ ಹಾರೈಸಿದರು.

.jpg)
