ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಹಲವಾರು ಕಡೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದಿಂದ ಪಾದಚಾರಿಗಳಿಗೆ ರಸ್ತೆ ದಾಟಲು ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ಈ ಬಗ್ಗೆ ಊರ ಜನರ ಮನವಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ತರಲು ಬಿಜೆಪಿ ಮಂಗಳೂರು ಸಂಸದ ಬ್ರಿಜೇಷ್ ಚೌಟ ಹಾಗು ಬಿಜೆಪಿ ಕೋಝೀಕೋಡ್ ವಲಯ ಉಪಾಧ್ಯಕ್ಷ ವಿಜಯ್ ರೈ ಮಂಗಲ್ಪಾಡಿ ನಿಯೋಗವು ದೆಹಲಿಯ ಸಚಿವರ ಕಚೇರಿಯಲ್ಲಿ ಭೇಟಿ ನೀಡಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಅಡ್ಕತ್ತಬೈಲ್, ಐಲ ದುರ್ಗಾಪರಮೇಶ್ವರಿ ಕ್ಷೇತ್ರದ ಮುಂಭಾಗ, ಬಂಗ್ರಮಂಜೇಶ್ವರ, ಕನಿಲ ಭಗವತಿ ಕ್ಷೇತ್ರ ಮುಂತಾದ ಪರಿಸರಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಸಚಿವರಲ್ಲಿ ಕೋರಿಕೆ ಸಲ್ಲಿಸಲಾಯಿತು.

.jpg)
