ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹದಿನಾರರ ಹರೆಯದ ಬಾಲಕಿ ಮನೆಗೆ ಏಕಾಏಕಿ ಆಗಮಿಸಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣನಾದ ಯುವಕನನ್ನು ಆಸುಪಾಸಿನ ಜನತೆ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮಂಗಳೂರು ಪರಂಗಿಪೇಟೆ ನಿವಾಸಿ, ಆಸಿಫ್(29)ಬಂಧಿತ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ.
ಭಾನುವಾರ ಸಂಜೆ ಘಟನೆ ನಡೆದಿದೆ. ಏಕಾಏಕಿ ಆಗಮಿಸಿದ ಯುವಕ ಬಾಲಕಿ ಮನೆಯೊಳಗೆ ತೆರಳಿದ್ದನು. ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಆಸುಪಾಸಿನವರು ಮನೆಯನ್ನು ಸುತ್ತುವರಿದು, ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಈತನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಈತನ ಮೊಬೈಲ್ ತಪಾಸಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

