ಮಂಜೇಶ್ವರ: ಮಾತೆಯಂದಿರಿಗೆ ಸನಾತನ ಸಂಸ್ಕಾರ, ಸಂಸ್ಕøತಿ ಮತ್ತು ಸನಾತನ ಧರ್ಮವನ್ನು ಸಂರಕ್ಷಣೆ ಮಾಡುವ ಶಕ್ತಿ ಇದೆ. ಮಾತೆಯರು ಶಕ್ತಿ ಸ್ವರೂಪಿಣಿ ಹಾಗೂ ವಾತ್ಸಲ್ಯ ದೇವಿಯೂ ಆಗಿದ್ದಾಳೆ. ಮಕ್ಕಳ ಭವಿಷ್ಯ ತಾಯಿಯ ಕಲ್ಪನೆಯತೆ ಇರುತ್ತದೆ. ಸಂಸ್ಕಾರ, ಸಂಸ್ಕøತಿ ಬಾಲ್ಯದಲ್ಲಿ ನೀಡಬೇಕೆಂದು ಅಬ್ಬಕ್ಕ ರಾಣಿ ಅಧ್ಯಯನ ಪೀಠದ ಸದಸ್ಯೆ ಧನಲಕ್ಷ್ಮೀ ಗಟ್ಟಿ ಕರೆ ನೀಡಿದರು.
ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯುತ್ತಿರುವ 45ನೇ ವರ್ಷದ ಮಂಜೇಶ್ವರ ಗಣೇಶೋತ್ಸವದ ಅಂಗವಾಗಿ ಬುಧವಾರ ನಡೆದ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣಗೈದು ಅವರು ಮಾತನಾಡಿದರು.
ಓಡಿಯೂರು ಸಂಸ್ಥಾನದ ಸಾದ್ವಿ ಮಾತಾನಂದಮಾಯಿ ದೀಪ ಪ್ರಜ್ವಲನೆಗೈದು ಸಭೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ರಜನಿ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ಶಾಸಕಿ ಭಗೀರಥಿ ಮುರುಳ್ಯ, ಮಂಗಳೂರು ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಪವಿತ್ರ ನಿರಂಜನ್, ಮಾಲತಿ ಟೀಚರ್, ಡಾ. ದೀಪ್ತಿ ರಾಣಿ, ಶ್ವೇತ ಮಂಜೇಶ್ವರ ಉಪಸ್ಥಿತರಿದ್ದರು.
ಅನುಪಮಾ ಸ್ವಾಗತಿಸಿ, ಚೈತ್ರ ವಂದಿಸಿದರು. ಅಶ್ರಿತ ನಿರೂಪಿಸಿದರು.

.jpg)
