HEALTH TIPS

ಒಬಿಸಿ ಕೆನೆಪದರ | ತುರ್ತ ಪರಿಷ್ಕರಣೆ ಅಗತ್ಯವಿದೆ: ಸಂಸದೀಯ ಸಮಿತಿ

ನವದೆಹಲಿ: ಇತರ ಹಿಂದುಳಿದ ವರ್ಗಗಳ (ಒಬಿಸಿ) 'ಕೆನೆಪದರ' ಆದಾಯ ಮಿತಿಯನ್ನು ತುರ್ತಾಗಿ ಪರಿಷ್ಕರಿಸಬೇಕಿದೆ ಎಂದು ಸಂಸದೀಯ ಸಮಿತಿ ತಿಳಿಸಿದೆ.

ಬಿಜೆಪಿ ಸಂಸದ ಗಣೇಶ್‌ ಸಿಂಗ್‌ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಶುಕ್ರವಾರ ಎಂಟನೇ ವರದಿಯನ್ನು ಸಂಸತ್ತಿಗೆ ಸಲ್ಲಿಸಿದ್ದು, '2017ರಲ್ಲಿ ಕೆನೆಪದರ ಆದಾಯ ಮಿತಿಯನ್ನು ವಾರ್ಷಿಕ ₹6.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ನಂತರ ಈ ಮಿತಿಯನ್ನು ಏರಿಸಿಲ್ಲ' ಎಂದು ಹೇಳಿದೆ.

'ಈಗಿರುವ ಮಿತಿಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಅರ್ಹ ಒಬಿಸಿ ಕುಟುಂಬದವರು ಮೀಸಲಾತಿ ಮತ್ತು ಸರ್ಕಾರ ಕಲ್ಯಾಣ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ' ಎಂದು ಅದು ತಿಳಿಸಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ನಿಯಮಗಳ ಪ್ರಕಾರ, 'ಕೆನೆಪದರದ ಮಿತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಅಥವಾ ಅಗತ್ಯವಿದ್ದರೆ ಅದಕ್ಕೂ ಮುನ್ನ ಪರಿಷ್ಕರಿಸಬಹುದು' ಎಂದೂ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

'ಈಗಿರುವ ಕೆನೆಪದರದ ಮಿತಿ ಕಡಿಮೆಯಾಗಿದ್ದು, ಒಬಿಸಿಯ ಕೆಲವೇ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಹಣದುಬ್ಬರ ಮತ್ತು ಆದಾಯದಲ್ಲಿನ ಏರಿಕೆಯನ್ನು ಗಣನೆಗೆ ತೆಗೆದುಕೊಂಡು ತುರ್ತಾಗಿ ಕೆನೆಪದರದ ಮಿತಿಯನ್ನು ಪರಿಷ್ಕರಿಸುವ ಅಗತ್ಯವಿದೆ' ಎಂದು ಅದು ಪ್ರತಿಪಾದಿಸಿದೆ.

'ಮೂರು ವರ್ಷಗಳು ಅಥವಾ ಅದಕ್ಕೂ ಮುನ್ನವೇ ಈ ಮಿತಿಯನ್ನು ಪರಿಷ್ಕರಿಸಲು ನಿಯಮದಲ್ಲಿ ಅವಕಾಶವಿದ್ದರೂ 2017ರ ಬಳಿಕ ಪರಿಷ್ಕರಣೆ ಆಗಿಲ್ಲ' ಎಂದು ಅದು ವರದಿಯಲ್ಲಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries